ಹಳಿಯಾಳ: ತಾಲ್ಲೂಕಿನಲ್ಲಿ ಮಾವಿನ ದರ ಕುಸಿದಿದ್ದರಿಂದ ರೈತರು ಹಾಗೂ ಮಾರಾಟಗಾರರು ತೀವ್ರ ಹಾನಿ ಅನುಭವಿಸುವಂತಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಹಣ್ಣುಗಳ ದರದಲ್ಲಿ ತೀರ ಕುಸಿತವಾಗಿದೆ. ಉತ್ತಮ ಗುಣಮಟ್ಟದ ಅಲ್ಪಾನ್ಸೊ(ಆಪೂಸ್) ಮತ್ತು ಕೇಸರ ಮಾವಿನ ಹಣ್ಣುಗಳ ಬೆಲೆ ಪ್ರತಿ ಡಜನ್ಗೆ ಕಳೆದ ವರ್ಷ ₹500ರಿಂದ ₹800 ಇತ್ತು. ಈಗ ಡಜನ್ಗೆ ₹200ರಿಂದ ₹300ರವರೆಗೆ ದರವಿದೆ.

ತಾಲ್ಲೂಕಿನಲ್ಲಿ ತೋತಾಪುರಿ, ಕಲಮಿ, ಮಲಗೋಬಾ, ಬೆನಿಶಾ, ನಿಲಮ್, ಹಿಮಾಯತ್ ಮತ್ತಿತರ ಮಾವಿನ ತಳಿಗಳು ಸಹ ಮಾರಾಕಟ್ಟೆಗೆ ಬಂದಿವೆ. ಇವುಗಳ ಬೆಲೆ ಸಹ ₹150ರಿಂದ ₹250ರಷ್ಟು ಮಾತ್ರ ಇದೆ. ಹಣ್ಣುಗಳು ದರ ಕಡಿಮೆ ಇದ್ದಾಗ ಸಹಜವಾಗಿ ಮಾರಾಟ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ಗ್ರಾಹಕರು ಸಹ ಮಾವಿನ ಹಣ್ಣುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೂ ಕಳೆದ ವಾರ ಕ್ವಿಂಟಲ್ಗೆ ₹2,500 ಇದ್ದರ ಮಾವಿನ ದರ, ಮಂಗಳವಾರ ಕ್ವಿಂಟಲ್ಗೆ ₹1,400ರಿಂದ ₹1,500ಕ್ಕೆ ಇಳಿದಿತ್ತು. ಮಾವಿನ ರಫ್ತು ಕಡಿಮೆಯಾದ ಕಾರಣ ಬೇಡಿಕೆ ಇಲ್ಲದೆ, ಸಂಸ್ಕರಣಾ ಘಟಕದಲ್ಲಿನ ಮಾವನ್ನು ಖರೀದಿದಾರರು ಸಹ ಖರೀದಿಸುತ್ತಿಲ್ಲ.

‘20 ವರ್ಷಗಳಿಂದ ಸ್ಥಳೀಯ ರೈತರು ಹಾಗೂ ಬೇರೆಡೆಯಿಂದ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದೇನೆ. ಈ ಬಾರಿ ಹಣ್ಣುಗಳನ್ನು ಖರೀದಿ ಪ್ರಮಾಣ ಕಡಿಮೆ ಆಗಿದೆ. ಗ್ರಾಹಕರು ಕೇಳಿದ ಹಣಕ್ಕೇ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇನೆ. ಇದರಿಂದ ಹೆಚ್ಚಿನ ಆದಾಐಯ ಸಿಗುತ್ತಿಲ್ಲ’ ಎಂದು ಮಾವು ಮಾರಟಗಾರ ಸಿಕಂದರ ಹಜರತಅಲಿ ಮುಂಡವಾಡ ಹೇಳಿದರು.

ಹಾನಿಯ ವರದಿ ಸಲ್ಲಿಕೆ: ‘2025–26ನೇ ಸಾಲಿನಲ್ಲಿ ಮಾವು ಬೆಳೆ ಹಾನಿಯಾಗಿದ್ದಕ್ಕೆ ವಿಮಾ ಪರಿಹಾರವಾಗಿ ₹1.25 ಕೋಟಿಯನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಈ ಬಾರಿ ಶೇ 80ರಿಂದ ಶೇ 90ರಷ್ಟು ಬೆಳೆ ಹಾನಿಯಾಗಿದೆ. ತೋಟಗಾರಿಕೆ ಇಲಾಖೆಯಿಂದ ಮಾವಿನ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ, ಮೇಲಧಿಕಾರಿ ಮೂಲಕ ವರದಿ ಸಲ್ಲಿಸಲಾಗಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕೆ ಇಲಾಖೆಯ ನಿರ್ದೇಶಕ ಎ.ಆರ್. ಹೆರಿಯಲ್ ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-20-2077554759

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.