ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಯ ನಿವೃತ್ತಿಗೆ ‘ವಯ ವಂದನಾ’

Last Updated 28 ಏಪ್ರಿಲ್ 2019, 17:01 IST
ಅಕ್ಷರ ಗಾತ್ರ

ಬಾಳಿನ ಮುಸ್ಸಂಜೆಯ ಹೊತ್ತಿನಲ್ಲಿ ನಿರ್ದಿಷ್ಟ ಆದಾಯ ನೀಡುವ ಶಿಸ್ತುಬದ್ಧ ಹೂಡಿಕೆ ಯೋಜನೆ ಅಗತ್ಯ. ಎಲ್ಲ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತಹ ‘ಪ್ರಧಾನಮಂತ್ರಿ ವಯ ವಂದನಾ’ ಯೋಜನೆಯನ್ನು (ಪಿಎಂವಿವಿವೈ) ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹಿರಿಯ ಜೀವಗಳಿಗೆ ಮಾಸಿಕ ಪಿಂಚಣಿ ಪಡೆದುಕೊಳ್ಳಲು ಅನುವಾಗುವಂತೆ ರೂಪಿಸಿರುವ ಯೋಜನೆಯ ಸಮಗ್ರ ವಿವರ ಇಲ್ಲಿದೆ.

ಏನಿದು ಯೋಜನೆ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರ, ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಕನಿಷ್ಠ ₹ 1.5 ಲಕ್ಷ ದಿಂದ ಗರಿಷ್ಠ ₹ 15 ಲಕ್ಷಗಳವರೆಗೆ ಹೂಡಿಕೆಗೆ ಅವಕಾಶವಿದೆ.

ಹೂಡಿಕೆ ಹಣಕ್ಕೆ ಅನುಗುಣವಾಗಿ ಮಾಸಿಕ ₹ 1 ಸಾವಿರದಿಂದ ₹ 10 ಸಾವಿರದವರೆಗೆ ಪಿಂಚಣಿ ಸಿಗುತ್ತದೆ. ಹಿರಿಯ ನಾಗರಿಕರು ಮಾಸಿಕ ಆದಾಯಕ್ಕೆ ಕಷ್ಟಪಡುತ್ತಿರುವಂತಹ ಸನ್ನಿವೇಶದಲ್ಲಿ ನಿರ್ದಿಷ್ಟ ಆದಾಯ ಖಾತರಿಪಡಿಸುವ ಈ ಪಿಂಚಣಿ ಯೋಜನೆ ಮಹತ್ವ ಪಡೆದುಕೊಂಡಿದೆ. ಈ ಯೋಜನೆಯಲ್ಲಿ ವಾರ್ಷಿಕ ಶೇ 8ರ ಖಾತರಿಯ ದರದಲ್ಲಿ ಪಿಂಚಣಿಯನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತಿದೆ. ಪಿಂಚಣಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ಪಡೆಯುವ ಆಯ್ಕೆ ಇದೆ. 10 ವರ್ಷಗಳ ಪಾಲಿಸಿ ಅವಧಿ ಮುಗಿದ ಬಳಿಕ ಪಾಲಿಸಿಗಾಗಿ ಹೂಡಿದ್ದ ಅಸಲು ಮೊತ್ತವನ್ನು ಪಿಂಚಣಿದಾರನಿಗೆ ನೀಡಲಾಗುತ್ತದೆ. ಒಂದೊಮ್ಮೆ ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಪಕ್ಷದಲ್ಲಿ ನಾಮಿನಿಗೆ ಹಣ ಸಿಗಲಿದೆ.

ಯೋಜನೆ ಲಭ್ಯತೆ: ಎಲ್‌ಐಸಿ ಜಾಲತಾಣ ಮತ್ತು ಜೀವ ವಿಮಾ ಕಚೇರಿಗಳಲ್ಲಿ ವಯ ವಂದನಾ ಯೋಜನೆ ಮಾಡಿಸಿಕೊಳ್ಳಲು ಸಾಧ್ಯವಿದೆ. ಈ ಯೋಜನೆಯ ಲಭ್ಯತೆ ಅವಧಿಯನ್ನು ಮಾರ್ಚ್ 2020 ರವರೆಗೆ ವಿಸ್ತರಿಸಲಾಗಿದೆ.

ಅವಧಿಗೆ ಮುನ್ನ ಯೋಜನೆಯಿಂದ ಹೊರಬರಬಹುದೇ: ಈ ಯೋಜನೆಯಲ್ಲಿ 10 ವರ್ಷ ಹೂಡಿಕೆ ಮಾಡಬೇಕು ಎನ್ನುವುದು ನಿಯಮ. ಆದರೆ, ಹೂಡಿಕೆ ಮಾಡಿರುವ ವ್ಯಕ್ತಿಗೆ ಅಥವಾ ಆತನ ಪತ್ನಿಗೆ ತೀವ್ರ ಅನಾರೋಗ್ಯ ಇದ್ದಲ್ಲಿ ಅವಧಿಗೆ ಮುನ್ನ ಯೋಜನೆಯಿಂದ ಹೊರಬರಲು ಅವಕಾಶವಿದೆ. ಅಂತಹ ಸಂದರ್ಭದಲ್ಲಿ ಪಾಲಿಸಿ ದಾಖಲೆಗಳನ್ನು ಹಿಂದಿರುಗಿಸಿ ಹೂಡಿಕೆ ಮಾಡಿದ ಶೇ 98 ರಷ್ಟು ಹಣವನ್ನು ಹಿಂಪಡೆಯಲು ಸಾಧ್ಯವಿದೆ.

ವೈದ್ಯಕೀಯ ಪರೀಕ್ಷೆ ಇದೆಯೇ: ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯ ಇರುವುದಿಲ್ಲ.

ಸಾಲ ಸಿಗುವುದೇ: ಯೋಜನೆ ಆರಂಭಿಸಿ ಮೂರು ವರ್ಷಗಳ ಬಳಿಕ ಹೂಡಿಕೆ ಮಾಡಿರುವ ಹಣದ ಆಧಾರದಲ್ಲಿ ಸಾಲ ಸಿಗುತ್ತದೆ. ಒಟ್ಟು ಹೂಡಿಕೆಯ ಶೇ 75 ರಷ್ಟು ಮಾತ್ರ ಸಾಲ ನೀಡಲಾಗುತ್ತದೆ.

ತ್ರೈಮಾಸಿಕ ಫಲಿತಾಂಶ ಒತ್ತಡದಲ್ಲಿ ಪೇಟೆ

ಷೇರುಪೇಟೆಯ ವಹಿವಾಟು ತ್ರೈಮಾಸಿಕ ಫಲಿತಾಂಶಗಳ ಪ್ರಭಾವಕ್ಕೆ ಒಳಗಾಗಿರುವ ಪರಿಣಾಮ ವಾರಪೂರ್ತಿ ಸೂಚ್ಯಂಕಗಳಲ್ಲಿ ಏರಿಳಿತ ಸಾಮಾನ್ಯ ಎನ್ನುವಂತಾಗಿತ್ತು. ಹಣಕಾಸು ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ ಕಂಪನಿಗಳು ಷೇರುಗಳ ಬೆಲೆ ಹಿಗ್ಗಿಸಿಕೊಂಡರೆ, ನಿರೀಕ್ಷಿತ ಸಾಧನೆ ತೋರದ ಕಂಪನಿಗಳು ಹಿನ್ನಡೆ ಅನುಭವಿಸಬೇಕಾಯಿತು.

ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 0.2 ರಷ್ಟು ಕಳೆದುಕೊಂಡು, 39,067 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 11,755 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿ ಶೇ 1 ರಷ್ಟು ಗಳಿಕೆ ಕಂಡಿದೆ.

ನಿಫ್ಟಿಯಲ್ಲಿ ಕುಸಿದ ವಾಹನ ವಲಯ: ನಿಫ್ಟಿ ವಲಯವಾರು ಪ್ರಗತಿಯಲ್ಲಿ ವಾಹನ ಉತ್ಪಾದನಾ ವಲಯ ಶೇ 5.3 ರಷ್ಟು ಕುಸಿದಿದೆ.

ಲೋಹ ವಲಯ ಶೇ 2 ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.6 ರಷ್ಟು ಹಿನ್ನಡೆ ಅನುಭವಿಸಿವೆ. ಐಟಿ ವಲಯ ಶೇ 2.6 ರಷ್ಟು ಪ್ರಗತಿಯೊಂದಿಗೆ ಮುಂಚೂಣಿಯಲ್ಲಿದ್ದರೆ, ಎಫ್‌ಎಂಸಿಜಿ ವಲಯ ಶೇ 0.6 ರಷ್ಟು ಗಳಿಸಿದೆ.

ಗಳಿಕೆ: ನಿಫ್ಟಿಯಲ್ಲಿ ಅಲ್ಟ್ರಾ ಟೆಕ್ ಸಿಮೆಂಟ್ ಈ ವಾರ ಅತ್ಯುತ್ತಮ ಸಾಧನೆ ತೋರಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿ ತನ್ನ ನಿವ್ವಳ ಲಾಭದಲ್ಲಿ ಶೇ 108 ರಷ್ಟು ಹೆಚ್ಚಳ ಸಾಧಿಸಿದ ಪರಿಣಾಮ, ಷೇರುಗಳು ಶೇ 8 ರಷ್ಟು ಪ್ರಗತಿ ಕಂಡಿವೆ.

ಆದಿತ್ಯ ಬಿರ್ಲಾ ಗ್ರೂಪ್‌ನ ಗ್ರಾಸಿಮ್ ಶೇ 5.3 ರಷ್ಟು ಏರಿಕೆ ಕಂಡಿದೆ. ಉತ್ತಮ ತ್ರೈಮಾಸಿಕ ಫಲಿತಾಂಶದ ನಿರೀಕ್ಷೆಯಲ್ಲಿ ಒಎನ್‌ಜಿಸಿ ಷೇರುಗಳ ಬೆಲೆಯಲ್ಲಿ ಶೇ 5 ರಷ್ಟು ಹೆಚ್ಚಳವಾಗಿದೆ.

ಜೀ ಎಂಟರ್‌ಟೇನ್‌ಮೆಂಟ್‌ ಶೇ 4 ರಷ್ಟು ಹೆಚ್ಚಳವಾಗಿದೆ. ಐಟಿ ಷೇರುಗಳಾದ ಟಿಸಿಎಸ್, ವಿಪ್ರೊ, ಇನ್ಫೊಸಿಸ್ ಶೇ 2.9 ರಿಂದ ಶೇ 4.1 ರವರೆಗೂ ಗಳಿಸಿಕೊಂಡಿವೆ.

ಇಳಿಕೆ: ಭಾರ್ತಿ ಇನ್ಫ್ರಾಟೆಲ್ 2018–19ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರದ ಪರಿಣಾಮ ಷೇರುಗಳು ಶೇ 11 ರಷ್ಟು ಕುಸಿದಿವೆ.

ಮಧ್ಯಮ ವರ್ಗದ ಕಾರುಗಳ ಮಾರುಕಟ್ಟೆಯಲ್ಲಿ ಪ್ರಮುಖ ಹೆಸರಾಗಿರುವ ಮಾರುತಿ ಸುಜುಕಿಯ ಷೇರುಗಳು ಶೇ 8 ರಷ್ಟು ಹಿನ್ನಡೆ ಕಂಡಿವೆ.

ಕಾರುಗಳ ಮಾರುಕಟ್ಟೆಯಲ್ಲಿ ಒಟ್ಟಾರೆ ಬೇಡಿಕೆ ಕುಸಿದಿರುವ ಪರಿಣಾಮ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ 4.6 ರಷ್ಟು ಕುಸಿದಿದೆ. ಟಾಟಾ ಮೋಟರ್ಸ್, ಹೀರೊ ಮೋಟೊ ಕಾರ್ಪ್, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮತ್ತು ಐಷರ್ ಮೋಟರ್ಸ್ ಷೇರುಗಳು ವಾರದ ಅವಧಿಯಲ್ಲಿ ಕುಸಿದಿವೆ.

ಯೆಸ್ ಬ್ಯಾಂಕ್ ತ್ರೈಮಾಸಿಕ ಫಲಿತಾಂಶದಲ್ಲಿ ಭಾರಿ ಹಿನ್ನಡೆ ಅನುಭವಿಸಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಶೇ 7 ರಷ್ಟು ಕುಸಿದಿದೆ. ಕಂಪನಿಯ ಬೆಳಣಿಗೆಯಲ್ಲಿ ಹಿನ್ನಡೆಯಾಗಿರುವ ಕಾರಣ ಇಂಡಿಯಾ ಬುಲ್ಸ್ ಹೌಸಿಂಗ್‌ನ ಷೇರುಗಳು ಶೇ 8 ರಷ್ಟು ಕುಸಿದಿವೆ.

ಮುನ್ನೋಟ: ಲೋಕಸಭಾ ಚುನಾವಣೆ, ಕಂಪನಿಗಳ ತ್ರೈಮಾಸಿಕ ವರದಿಗಳು, ಕಚ್ಚಾ ತೈಲ ಬೆಲೆ ಏರಿಕೆ ಸೇರಿ ಹಲವು ಬಾಹ್ಯ ವಿದ್ಯಮಾನಗಳು ಪೇಟೆಯ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

ಟಿವಿಎಸ್ ಮೋಟರ್ಸ್, ಬ್ರಿಟಾನಿಯಾ, ಬಾಂಬೆ ಡೈಯಿಂಗ್, ಡಾಬರ್, ಟಾಟಾ ಪವರ್, ಟಾಟಾ ಕೆಮಿಕಲ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ)

ತ್ರೈಮಾಸಿಕ ಫಲಿತಾಂಶ ಒತ್ತಡದಲ್ಲಿ ಪೇಟೆ

ಷೇರುಪೇಟೆಯ ವಹಿವಾಟು ತ್ರೈಮಾಸಿಕ ಫಲಿತಾಂಶಗಳ ಪ್ರಭಾವಕ್ಕೆ ಒಳಗಾಗಿರುವ ಪರಿಣಾಮ ವಾರಪೂರ್ತಿ ಸೂಚ್ಯಂಕಗಳಲ್ಲಿ ಏರಿಳಿತ ಸಾಮಾನ್ಯ ಎನ್ನುವಂತಾಗಿತ್ತು. ಹಣಕಾಸು ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ ಕಂಪನಿಗಳು ಷೇರುಗಳ ಬೆಲೆ ಹಿಗ್ಗಿಸಿಕೊಂಡರೆ, ನಿರೀಕ್ಷಿತ ಸಾಧನೆ ತೋರದ ಕಂಪನಿಗಳು ಹಿನ್ನಡೆ ಅನುಭವಿಸಬೇಕಾಯಿತು.

ವಾರದ ಅವಧಿಯಲ್ಲಿ ಸನ್ಸೆಕ್ಸ್ ಶೇ 0.2 ರಷ್ಟು ಕಳೆದುಕೊಂಡು, 39,067 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 11,755 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿ ಶೇ 1 ರಷ್ಟು ಗಳಿಕೆ ಕಂಡಿದೆ.

ನಿಫ್ಟಿಯಲ್ಲಿ ಕುಸಿದ ವಾಹನ ವಲಯ: ನಿಫ್ಟಿ ವಲಯವಾರು ಪ್ರಗತಿಯಲ್ಲಿ ವಾಹನ ಉತ್ಪಾದನಾ ವಲಯ ಶೇ 5.3 ರಷ್ಟು ಕುಸಿದಿದೆ.

ಲೋಹ ವಲಯ ಶೇ 2 ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.6 ರಷ್ಟು ಹಿನ್ನಡೆ ಅನುಭವಿಸಿವೆ. ಐಟಿ ವಲಯ ಶೇ 2.6 ರಷ್ಟು ಪ್ರಗತಿಯೊಂದಿಗೆ ಮುಂಚೂಣಿಯಲ್ಲಿದ್ದರೆ, ಎಫ್‌ಎಂಸಿಜಿ ವಲಯ ಶೇ 0.6 ರಷ್ಟು ಗಳಿಸಿದೆ.

ಗಳಿಕೆ: ನಿಫ್ಟಿಯಲ್ಲಿ ಅಲ್ಟ್ರಾ ಟೆಕ್ ಸಿಮೆಂಟ್ ಈ ವಾರ ಅತ್ಯುತ್ತಮ ಸಾಧನೆ ತೋರಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿ ತನ್ನ ನಿವ್ವಳ ಲಾಭದಲ್ಲಿ ಶೇ 108 ರಷ್ಟು ಹೆಚ್ಚಳ ಸಾಧಿಸಿದ ಪರಿಣಾಮ, ಷೇರುಗಳು ಶೇ 8 ರಷ್ಟು ಪ್ರಗತಿ ಕಂಡಿವೆ.

ಆದಿತ್ಯ ಬಿರ್ಲಾ ಗ್ರೂಪ್‌ನ ಗ್ರಾಸಿಮ್ ಶೇ 5.3 ರಷ್ಟು ಏರಿಕೆ ಕಂಡಿದೆ. ಉತ್ತಮ ತ್ರೈಮಾಸಿಕ ಫಲಿತಾಂಶದ ನಿರೀಕ್ಷೆಯಲ್ಲಿ ಒಎನ್‌ಜಿಸಿ ಷೇರುಗಳ ಬೆಲೆಯಲ್ಲಿ ಶೇ 5 ರಷ್ಟು ಹೆಚ್ಚಳವಾಗಿದೆ. ಜೀ ಎಂಟರ್‌ಟೇನ್‌ಮೆಂಟ್‌ ಶೇ 4 ರಷ್ಟು ಹೆಚ್ಚಳವಾಗಿದೆ. ಐಟಿ ಷೇರುಗಳಾದ ಟಿಸಿಎಸ್, ವಿಪ್ರೊ, ಇನ್ಫೊಸಿಸ್ ಶೇ 2.9 ರಿಂದ ಶೇ 4.1 ರಷ್ಟು ಗಳಿಸಿಕೊಂಡಿವೆ.

ಇಳಿಕೆ: ಭಾರ್ತಿ ಇನ್ಫ್ರಾಟೆಲ್ ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರದ ಪರಿಣಾಮ ಷೇರುಗಳು ಶೇ 11 ರಷ್ಟು ಕುಸಿದಿವೆ. ಮಧ್ಯಮ ವರ್ಗದ ಕಾರುಗಳ ಮಾರುಕಟ್ಟೆಯಲ್ಲಿ ಪ್ರಮುಖ ಹೆಸರಾಗಿರುವ ಮಾರುತಿ ಸುಜುಕಿಯ ಷೇರುಗಳು ಶೇ 8 ರಷ್ಟು ಹಿನ್ನಡೆ ಕಂಡಿವೆ.

ಕಾರುಗಳ ಮಾರುಕಟ್ಟೆಯಲ್ಲಿ ಒಟ್ಟಾರೆ ಬೇಡಿಕೆ ಕುಸಿದಿರುವ ಪರಿಣಾಮ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ 4.6 ರಷ್ಟು ಕುಸಿದಿದೆ. ಟಾಟಾ ಮೋಟರ್ಸ್, ಹೀರೊ ಮೋಟೊ ಕಾರ್ಪ್, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಮತ್ತು ಐಷರ್ ಮೋಟರ್ಸ್ ಷೇರುಗು ವಾರದ ಅವಧಿಯಲ್ಲಿ ಕುಸಿದಿವೆ.

ಯೆಸ್ ಬ್ಯಾಂಕ್ ತ್ರೈಮಾಸಿಕ ಫಲಿತಾಂಶದಲ್ಲಿ ಭಾರಿ ಹಿನ್ನಡೆ ಅನುಭವಿಸಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಶೇ 7 ರಷ್ಟು ಕುಸಿದಿದೆ. ಕಂಪನಿಯ ಬೆಳಣಿಗೆಯಲ್ಲಿ ಹಿನ್ನಡೆಯಾಗಿರುವ ಕಾರಣ ಇಂಡಿಯಾ ಬುಲ್ಸ್ ಹೌಸಿಂಗ್‌ನ ಷೇರುಗಳು ಶೇ 8 ರಷ್ಟು ಕುಸಿದಿವೆ.

ಮುನ್ನೋಟ: ಲೋಕಸಭಾ ಚುನಾವಣೆ, ಕಂಪನಿಗಳ ತ್ರೈಮಾಸಿಕ ವರದಿಗಳು, ಕಚ್ಚಾ ತೈಲ ಬೆಲೆ ಏರಿಕೆ ಸೇರಿ ಹಲವು ಬಾಹ್ಯ ವಿದ್ಯಮಾನಗಳು ಪೇಟೆಯ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿವೆ.

ಟಿವಿಎಸ್ ಮೋಟರ್ಸ್, ಬ್ರಿಟಾನಿಯಾ, ಬಾಂಬೆ ಡೈಯಿಂಗ್, ಡಾಬರ್, ಟಾಟಾ ಪವರ್, ಟಾಟಾ ಕೆಮಿಕಲ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಕಂಪನಿಲಾಭಾಂಶ/ ಪ್ರತಿ ಷೇರಿಗೆ ಮಾರುತಿ ಸುಜುಕಿ
₹ 80
ಟಾಟಾ ಸ್ಟೀಲ್
₹ 13
ನೆಸ್ಟ್ಲೇ ಇಂಡಿಯಾ
₹ 23
ಬಯೋಕಾನ್
₹ 1
ಆಪ್ ಕೋಟೆಕ್ಸ್ ಇಂಡಸ್ಟ್ರೀಸ್
₹ 7.50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT