ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 20ರಷ್ಟು ಕೈಮಗ್ಗ ಉತ್ಪನ್ನ ಖರೀದಿ ಕಡ್ಡಾಯ

Last Updated 1 ಮಾರ್ಚ್ 2020, 17:54 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಪ್ರತಿಯೊಂದು ಇಲಾಖೆಯು ತನ್ನ ಜವಳಿ ಅಗತ್ಯಗಳಿಗಾಗಿ ಶೇ 20ರಷ್ಟು ಉತ್ಪನ್ನಗಳನ್ನು ಕೈಮಗ್ಗ ಕ್ಲಸ್ಟರ್‌ ಮತ್ತು ನೋಂದಾಯಿತ ನೇಕಾರರಿಂದ ಖರೀದಿಸುವುದನ್ನು ಹಣಕಾಸು ಇಲಾಖೆಯು ಕಡ್ಡಾಯ ಮಾಡಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ. ಕೈಮಗ್ಗ ಕ್ಲಸ್ಟರ್ಸ್‌ಗಳಲ್ಲಿ ಸಹಕಾರಿ ಸಂಘಗಳು, ಸ್ವಸಹಾಯ ಗುಂಪುಗಳ ಒಕ್ಕೂಟಗಳು, ಜಂಟಿ ಹೊಣೆಗಾರಿಕೆಯ ಗುಂಪುಗಳು, ನೇಕಾರರ ನಿಗಮಗಳು ಸೇರಿವೆ.

2020–21ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಖಾದಿ, ಗ್ರಾಮೋದ್ಯೋಗ ಮತ್ತು ತೆಂಗಿನನಾರು ಉದ್ದಿಮೆಯ ಅನುದಾನವನ್ನು ₹ 1,526 ಕೋಟಿಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT