ಅಮರೇಶ ನಾಯಕ

ಹಟ್ಟಿ ಚಿನ್ನದ ಗಣಿ: ಬಿಸಿಲು ವಿಪರೀತ ಎನ್ನುವಷ್ಟು ಹೆಚ್ಚಿದೆ. ತಾಪ ತಾಳಲಾರದೆ ಜನ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು ದರ ಜನರ ಕೈ ಸುಡುತ್ತಿದೆ.

ಬೇಸಿಗೆಯಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ₹40 ರಿಂದ₹50 ಇದ್ದ ಒಂದು ಎಳನೀರಿನ ಬೆಲೆ ಏಕಾಏಕಿ ₹60 ರಿಂದ₹70ಗೆ ಏರಿಕೆಯಾಗಿದೆ. ದೇಹ ತಂಪು ಮಾಡಿಕೊಳ್ಳಲು ಹೋಗುವವರಿಗೆ ಎಳನೀರಿನ ಬೆಲೆ ಕೇಳುತ್ತಿದ್ದಂತೆ ಜೇಬು ಬಿಸಿಯಾಗುತ್ತಿದೆ.

ಆಸ್ಪತ್ರಗೆ ರೋಗಿಗಳನ್ನು ಮಾತನಾಡಿಸಲು ಬರುವ ಸಂಬಂಧಿಕರು ಎಳೆನೀರಿನ ಬದಲು ಬೇರೆ ಪಾನೀಯಗಳಿಗೆ ಮೋರೆ ಹೋಗಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.

ಗಾತ್ರಕ್ಕೆ ತಕ್ಕಂತೆ ₹30ರಿಂದ ₹70 ವರೆಗೂ ಒಂದು ಎಳನೀರಿನ ಬೆಲೆ ಇದೆ.

ಬೆಲೆ ಹೆಚ್ಚಾದರೂ ಪಾರವಾಗಿಲ್ಲ ಆರೋಗ್ಯಕ್ಕೆ ಒಳ್ಳೆಯದು ಎಂದು ಜನರು ಎಳನೀರು ಸೇವಿಸುತ್ತಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ₹50ನಂತೆ ಮಾರಾಟವಾಗುತ್ತಿತ್ತು.

ಕುಗ್ಗಿದ ಪೂರೈಕೆ ಹೆಚ್ಚಿದ ಬೇಡಿಕೆ: ಪ್ರಸಕ್ತ ವರ್ಷದಲ್ಲಿ ಇಳುವರಿ ಕಡಿಮೆ ಆಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುವ ಪಾನೀಯ ಎಂದರೆ ಎಳನೀರು. ಮಂಡ್ಯ, ಮದ್ದೂರು, ಚಿತ್ರದುರ್ಗದಿಂದ ಪ್ರತಿ ವರ್ಷ ಈ ಭಾಗಕ್ಕೆ ಎಳನೀರು ಪೂರೈಕೆ ಆಗುತ್ತಿತ್ತು. ಅಲ್ಲಿಯೂ ಇಳುವರಿ ಕಡಿಮೆಯಾಗಿರುವುದರಿಂದ ಪೂರೈಕೆ ಕಡಿಮೆಯಾಗಿದೆ ಎನ್ನುತ್ತಾರೆ ಎಳನೀರು ವ್ಯಾಪಾರಿ ಬೀಮನಗೌಡ.

ಮಾರುಕಟ್ಟೆಯಲ್ಲಿ ಎಳನೀರಿನ ಬೆಲೆ ಹೆಚ್ಚಾಗಿದ್ದರೂ ಒಂದಕ್ಕೆ ರೈತರಿಗೆ ₹20 ಮಾತ್ರ ಸಿಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-32-294346751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.