ಶುಕ್ರವಾರ, ಮೇ 20, 2022
23 °C

ಸಿಬ್ಬಂದಿಗೆ ವಿಶೇಷ ಬೋನಸ್‌ ಘೋಷಿಸಿದ ಎಚ್‌ಸಿಎಲ್ ಟೆಕ್ನಾಲಜೀಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯ ವರಮಾನವು 2020ರಲ್ಲಿ ₹ 72,800 ಕೋಟಿಯ ಮೈಲಿಗಲ್ಲು ತಲುಪಿದೆ. ಈ ಸಂಭ್ರಮಕ್ಕಾಗಿ ತನ್ನ ಸಿಬ್ಬಂದಿಗೆ ₹ 700 ಕೋಟಿಗೂ ಹೆಚ್ಚಿನ ಮೊತ್ತದ ವಿಶೇಷ ಬೋನಸ್‌ ನೀಡುವುದಾಗಿ ಸೋಮವಾರ ಘೋಷಿಸಿದೆ.

ಫೆಬ್ರುವರಿ ತಿಂಗಳಿನಲ್ಲಿಯೇ ವಿಶೇಷ ಬೋನಸ್‌ ನೀಡುವುದಾಗಿ ಅದು ಹೇಳಿದೆ. ಒಂದು ವರ್ಷದ ಸೇವೆ ಅಥವಾ ಹೆಚ್ಚಿನ ಸೇವೆಯನ್ನು ಹೊಂದಿರುವ ಎಲ್ಲಾ ಉದ್ಯೋಗಿಗಳು ಹತ್ತು ದಿನಗಳ ಸಂಬಳಕ್ಕೆ ಸಮಾನವಾದ ಬೋನಸ್ ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಎಚ್‌ಸಿಎಲ್‌ ಕುಟುಂಬದ ಪ‍್ರತಿಯೊಬ್ಬ ಸದಸ್ಯರು ತೋರಿಸಿದ ಬದ್ಧತೆ ಮತ್ತು ಉತ್ಸಾಹದಿಂದ ಕಂಪನಿಯು ಈ ಪ್ರಮಾಣದ ಬೆಳವಣಿಗೆ ಕಾಣಲು ಸಾಧ್ಯವಾಗಿದೆ ಎಂದು ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಅಧಿಕಾರಿ ಅಪ್ಪಾರಾವ್‌ ವಿ.ವಿ. ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು