ಮುಂಬೈ (ಪಿಟಿಐ): ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್ಡಿಎಫ್ಸಿ ಬ್ಯಾಂಕ್, ಮಾರ್ಚ್ ತ್ರೈಮಾಸಿಕದಲ್ಲಿ ₹20,350 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್ ₹18,834 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ 8ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್ ಶನಿವಾರ ತಿಳಿಸಿದೆ.

ಬ್ಯಾಂಕ್ನ ಒಟ್ಟು ವರಮಾನವು ₹89,809 ಕೋಟಿಯಾಗಿದೆ. ವೆಚ್ಚವು ₹62,951 ಕೋಟಿಯಿಂದ ₹62,006 ಕೋಟಿಗೆ ಇಳಿದಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣ ಶೇ 1.24ರಿಂದ ಶೇ 1.15ಕ್ಕೆ ಇಳಿದಿದೆ. ಸಂಭಾವ್ಯ ನಷ್ಟ ಸರಿದೂಗಿಸಲು ತೆಗೆದಿರಿಸುವ ಮೊತ್ತವು ₹3,193 ಕೋಟಿಯಿಂದ ₹2,610 ಕೋಟಿಗೆ ಇಳಿದಿದೆ ಎಂದು ತಿಳಿಸಿದೆ.

ಪ್ರತಿ ಷೇರಿಗೆ ₹13 ಅಂತಿಮ ಲಾಭಾಂಶ ನೀಡಲು ಬ್ಯಾಂಕ್ನ ಆಡಳಿತ ಮಂಡಳಿಯು ಶಿಫಾರಸು ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1575803871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.