ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಎಫ್‌ಸಿ ವಿಲೀನಕ್ಕೆ ಕಾನೂನು ತೊಡಕು?

Last Updated 5 ಏಪ್ರಿಲ್ 2022, 16:17 IST
ಅಕ್ಷರ ಗಾತ್ರ

ಮುಂಬೈ (ರಾಯಿಟರ್ಸ್): ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ವಿಲೀನಕ್ಕೆ ಕೆಲವು ಕಾನೂನು ತೊಡಕುಗಳು ಎದುರಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ಗಳು ವಿಮಾ ಕಂಪನಿಗಳಲ್ಲಿ ಹೊಂದುವ ಷೇರುಪಾಲಿಗೆ ಮಿತಿ ಇರಬೇಕು ಎಂದು ಆರ್‌ಬಿಐ ಬಯಸುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಡಿಎಫ್‌ಸಿಯನ್ನು ತನ್ನಲ್ಲಿ ವಿಲೀನ ಮಾಡಿಕೊಳ್ಳಲಿದ್ದು, ಇದರಲ್ಲಿ ವಿಮಾ ಕಂಪನಿಗಳೂ ಸೇರಿವೆ.

ಎಚ್‌ಡಿಎಫ್‌ಸಿ ಲೈಫ್ ಮತ್ತು ಎಚ್‌ಡಿಎಫ್‌ಸಿ ಇಆರ್‌ಜಿಒ ಖಾಸಗಿ ವಲಯದ ಪ್ರಮುಖ ವಿಮಾ ಕಂಪನಿಗಳು. ವಿಲೀನದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ ತೆಕ್ಕೆಗೆ ದೊಡ್ಡ ಪ್ರಮಾಣದ ವಿಮಾ ವಹಿವಾಟುಗಳು ಬರಲಿದ್ದು, ಇದಕ್ಕೆ ಆರ್‌ಬಿಐ ಆಕ್ಷೇಪ ವ್ಯಕ್ತಪಡಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆರ್‌ಬಿಐ ನಿಯಮಗಳ ಪಾಲನೆ ವಿಚಾರದಲ್ಲಿ ಸ್ಪಷ್ಟನೆ ಕೋರಲಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಸೋಮವಾರ ಹೇಳಿದೆ. ‘ಹಲವು ಅಂಗಸಂಸ್ಥೆಗಳನ್ನು ಕೂಡ ವಿಲೀನ ಮಾಡಬೇಕಿರುವ ಕಾರಣ, ಕಾನೂನಿನ ಅಡಚಣೆಗಳು ಎದುರಾಗಬಹುದು. ಅದರಲ್ಲೂ ಮುಖ್ಯವಾಗಿ ವಿಮಾ ಕಂಪನಿಗಳ ವಿಚಾರದಲ್ಲಿ ತೊಡಕುಗಳು ಎದುರಾಗಬಹುದು’ ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಈ ವಿಚಾರವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಆರ್‌ಬಿಐ ಕಡೆಯಿಂದ ಮಂಗಳವಾರ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT