ಬುಧವಾರ, ಸೆಪ್ಟೆಂಬರ್ 29, 2021
20 °C

ಅಮೆಜಾನ್‌ಗೆ ಯುರೋಪಿಯನ್ ಒಕ್ಕೂಟದಿಂದ ₹6,500 ಕೋಟಿ ದಂಡ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಲಂಡನ್: ದತ್ತಾಂಶ ಸಂರಕ್ಷಣಾ ನಿಯಮವನ್ನು (ಜಿಡಿಪಿಆರ್) ಉಲ್ಲಂಘಿಸಿ ವೈಯಕ್ತಿಕ ದತ್ತಾಂಶ ಬಳಸಿದ್ದಕ್ಕಾಗಿ ಯುರೋಪಿಯನ್ ಒಕ್ಕೂಟವು ‘ಅಮೆಜಾನ್‌ ಡಾಟ್‌ ಕಾಂ’ಗೆ 886.6 ದಶಲಕ್ಷ ಡಾಲರ್ (ಸುಮಾರು ₹6,500 ಕೋಟಿ) ದಂಡ ವಿಧಿಸಿದೆ.

ಲಕ್ಸೆಂಬರ್ಗ್‌ನ ರಾಷ್ಟ್ರೀಯ ದತ್ತಾಂಶ ಸಂರಕ್ಷಣಾ ಆಯೋಗವು (ಸಿಎನ್‌ಪಿಡಿ) ಕಂಪನಿಯ ಯುರೋಪ್ ಘಟಕಕ್ಕೆ ದಂಡ ವಿಧಿಸಿ ಜುಲೈ 16ರಂದು ಆದೇಶಿಸಿತ್ತು ಎಂದು ಅಮೆಜಾನ್‌ ತಿಳಿಸಿದೆ.

ಓದಿ: ಗರ್ಭಪಾತದ ಔಷಧ, ಕಿಟ್‌ ಮಾರಾಟ: ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ನೋಟಿಸ್‌

‘ಆಯೋಗದ ನಿರ್ಧಾರವು ಸರಿಯಾದ ಕ್ರಮವಲ್ಲ ಎಂದು ಭಾವಿಸುತ್ತೇವೆ. ಈ ವಿಚಾರದಲ್ಲಿ ಬಲವಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಉದ್ದೇಶ ಹೊಂದಿದ್ದೇವೆ’ ಎಂದೂ ಕಂಪನಿ ತಿಳಿಸಿದೆ.

ಕಂಪನಿಗಳು ವೈಯಕ್ತಿಕ ದತ್ತಾಂಶವನ್ನು ಬಳಸುವ ಮೊದಲು ಜನರ ಒಪ್ಪಿಗೆಯನ್ನು ಪಡೆಯಬೇಕು. ಇಲ್ಲವಾದಲ್ಲಿ ಭಾರಿ ದಂಡ ತೆರಬೇಕು ಎಂದು ದತ್ತಾಂಶ ಸಂರಕ್ಷಣಾ ನಿಯಮದಲ್ಲಿ ಉಲ್ಲೇಖವಾಗಿದೆ.

ಯುರೋಪಿಯನ್ ಒಕ್ಕೂಟದ ಖಾಸಗಿತನ ನೀತಿಯ ಅಡಿಯಲ್ಲಿ ಕಂಪನಿಗೆ ಭಾರಿ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ವಾಲ್‌ಸ್ಟ್ರೀಟ್ ಜರ್ನಲ್’ ಜೂನ್‌ನಲ್ಲೇ ವರದಿ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು