ಮಂಗಳವಾರ, ಜುಲೈ 27, 2021
20 °C
ಬಿತ್ತನೆ ಪ್ರದೇಶ ಶೇ 21ರಷ್ಟು ಹೆಚ್ಚಳ

ಉತ್ತಮ ಮುಂಗಾರು: ಚುರುಕು ಪಡೆದ ಕೃಷಿ ಚಟುವಟಿಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಮುಂಗಾರು ಉತ್ತಮವಾಗಿದ್ದು, ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿದೆ.

ಕೃಷಿ ಚಟುವಟಿಕೆಗಳ ಮೇಲೆ ಕೋವಿಡ್‌ ಪರಿಣಾಮ ಬೀರಿಲ್ಲ. ಈ ಬಾರಿ ಜುಲೈ 17ರವರೆಗೆ 6.92 ಕೋಟಿ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 21.2ರಷ್ಟು ಹೆಚ್ಚುವರಿ ಪ್ರದೇಶದಲ್ಲಿ ಬಿತ್ತನೆ ಆಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 5.71 ಕೋಟಿ ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿತ್ತು. ಸಾಮಾನ್ಯವಾಗಿ ಮುಂಗಾರು ದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ರೈತರು ಜೂನ್‌ನಿಂದ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಅದು ಜುಲೈ ಅಂತ್ಯದವರೆಗೆ ಅಥವಾ ಆಗಸ್ಟ್‌ನ ಮೊದಲ ವಾರದವರೆಗೂ ಮುಂದುವರಿಯುತ್ತದೆ.

ಸೋಯಾಬೀನ್‌ ಬಿತ್ತನೆಯು ಈ ಬಾರಿ ಶೇ 15ರಷ್ಟು ಹೆಚ್ಚಾಗುವ ಅಂದಾಜು ಮಾಡಲಾಗಿದೆ. ಕಬ್ಬು ಬಿತ್ತನೆ ಪ್ರದೇಶವು 50 ಲಕ್ಷ ಹೆಕ್ಟೇರ್‌ನಿಂದ 51 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಏಕದಳಧಾನ್ಯಗಳ ಬಿತ್ತನೆ 1.03 ಕೋಟಿ ಹೆಕ್ಟೇರ್‌ಗಳಿಂದ 1.15 ಕೋಟಿ ಹೆಕ್ಟೇರ್‌ಗಳಿಗೆ ಶೇ 12ರಷ್ಟು ಹೆಚ್ಚಾಗಿದೆ. ಸರಾಸರಿಗಿಂತಲೂ ಅಧಿಕ ಮಳೆಯಾಗುತ್ತಿರುವುದರಿಂದ ದೇಶದ ಪ್ರಮುಖ 123 ಜಲಾಶಯಗಳ ನೀರಿನ ಮಟ್ಟ ಉತ್ತಮ ಸ್ಥಿತಿಯಲ್ಲಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು