ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟ ಜಾಲ ವಿಸ್ತರಿಸಲಿದೆ ಹೀರೊ ಎಲೆಕ್ಟ್ರಿಕ್

Last Updated 25 ಅಕ್ಟೋಬರ್ 2021, 11:24 IST
ಅಕ್ಷರ ಗಾತ್ರ

ನವದೆಹಲಿ: ಹೀರೊ ಎಲೆಕ್ಟ್ರಿಕ್‌ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ತನ್ನ ಮಾರಾಟ ಕೇಂದ್ರಗಳ ಒಟ್ಟು ಸಂಖ್ಯೆಯನ್ನು ಒಂದು ಸಾವಿರಕ್ಕೆ ಹೆಚ್ಚಿಸುವುದಾಗಿ ಸೋಮವಾರ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 500ಕ್ಕೂ ಅಧಿಕ ನಗರಗಳಲ್ಲಿ 700ಕ್ಕೂ ಅಧಿಕ ಮಾರಾಟ ಮಳಿಗೆಗಳನ್ನು ಹೊಂದಿದ್ದು, ದೇಶದಾದ್ಯಂತ ಇನ್ನೂ 300 ಹೊಸ ಕೇಂದ್ರಗಳನ್ನು ಆರಂಭಿಸುವುದಾಗಿ ಕಂಪನಿ ತಿಳಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗ್ರಾಹಕ ಸ್ನೇಹಿ ನೀತಿಗಳು, ಉತ್ತಮ ಮೂಲಸೌಕರ್ಯ ಹಾಗೂ ಜಾಗೃತಿಯ ಕಾರಣಗಳಿಂದಾಗಿ ಮಾರಾಟ ಜಾಲ ವಿಸ್ತರಣೆ ಮಾಡಲು ಉತ್ತೇಜನ ದೊರೆತಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರಾಟ ಜಾಲ ವಿಸ್ತರಣೆಯು ಎಲೆಕ್ಟ್ರಿಕ್ ವಾಹನ ವಿಭಾಗದ ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. ಡಿಜಿಟಲ್‌ ಮೂಲಕವೇ ಎಲ್ಲವನ್ನೂ ಗ್ರಾಹಕರಿಗೆ ವಿವರಿಸಲು ಆಗುವುದಿಲ್ಲ. ಗ್ರಾಹಕರನ್ನು ಸಂತೃಪ್ತಿಪಡಿಸಲು ಸುಸಜ್ಜಿತವಾದಿ ಮಾರಾಟ ಕೇಂದ್ರಗಳು ಅಗತ್ಯವಾಗಿವೆ. ಬ್ರ್ಯಾಂಡ್‌ನ ನಂಬಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸುವಲ್ಲಿ ಗ್ರಾಕರೊಂದಿಗೆ ಮುಖಾಮುಖ ಸಂವಹನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಂಪನಿಯ ಸಿಇಒ ಸೋಹಿಂದರ್‌ ಗಿಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT