ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ ಲೆಕ್ಟ್ರೊ ಬೆಲೆ ₹ 5 ಸಾವಿರದವರೆಗೆ ಏರಿಕೆ

Last Updated 10 ನವೆಂಬರ್ 2021, 11:15 IST
ಅಕ್ಷರ ಗಾತ್ರ

ನವದೆಹಲಿ: ಹೀರೊ ಸೈಕಲ್ಸ್‌ನ ವಿದ್ಯುತ್ ಚಾಲಿತ ಬೈಸಿಕಲ್‌ ಬ್ರ್ಯಾಂಡ್‌ ಹೀರೊ ಲೆಕ್ಟ್ರೊ ತನ್ನ ಎಲ್ಲ ಮಾದರಿಗಳ ಬೆಲೆಯನ್ನು ₹ 3 ಸಾವಿರದಿಂದ ₹ 5 ಸಾವಿರದವರೆಗೆ ಏರಿಕೆ ಮಾಡಿರುವುದಾಗಿ ಬುಧವಾರ ತಿಳಿಸಿದೆ.

ತಯಾರಿಕಾ ವೆಚ್ಚ ಮತ್ತು ಸರಕು ಸಾಗಣೆ ವೆಚ್ಚದಲ್ಲಿ ಹೆಚ್ಚಳ ಆಗಿರುವುದರಿಂದ ಬೆಲೆ ಏರಿಕೆ ಮಾಡಿರುವುದಾಗಿ ಕಂಪನಿ ಹೇಳಿದೆ. ಬೆಲೆ ಏರಿಕೆಯು ಮಾದರಿಗಳ ಆಧಾರದ ಮೇಲೆ ಶೇಕಡ 7.5ರಿಂದ ಶೇ 12.8ರವರೆಗೂ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹೀರೊ ಲೆಕ್ಟ್ರೊ ಬ್ರ್ಯಾಂಡ್‌, 10 ಆವೃತ್ತಿಗಳನ್ನು ಒಳಗೊಂಡಿರುವ ಸಿ ಸರಣಿಯ ವಿದ್ಯುತ್ ಚಾಲಿತ ಬೈಸಿಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ಆರಂಭಿಕ ಬೆಲೆಯು ₹ 28,999 ಇದೆ. ಬೆಲೆಯಲ್ಲಿ ಏರಿಕೆ ಮಾಡಿರುವುದರಿಂದ ಸುಧಾರಿತ ಎಫ್‌6ಐ ಮಾದರಿಯ ಬೆಲೆಯು ₹ 54,999ಕ್ಕೆ ಏರಿಕೆ ಆಗಿದೆ.

ಕಂಪನಿಯು ದೇಶದಾದ್ಯಂತ 600 ವಿತರಣಾ ಕೇಂದ್ರಗಳ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT