ಬುಧವಾರ, ನವೆಂಬರ್ 13, 2019
28 °C

ಹೂಡಿಕೆ ತಗ್ಗಿಸಲಿದೆ ಹೀರೊ ಮೋಟೊಕಾರ್ಪ್‌

Published:
Updated:

ನವದೆಹಲಿ: ವಾಹನ ಮಾರಾಟ ಕುಸಿತ ಕಾಣುತ್ತಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಬಂಡವಾಳ ಹೂಡಿಕೆ ಮಾಡುವುದಾಗಿ ಹೀರೊ ಮೋಟೊಕಾರ್ಪ್‌ ಕಂಪನಿ ತಿಳಿಸಿದೆ.

2018–19ರಲ್ಲಿ ₹ 700 ಕೋಟಿ ಹೂಡಿಕೆ ಮಾಡಲಾಗಿತ್ತು. ಈ ಬಾರಿ ₹1,500 ಹೂಡಿಕೆ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಮಾರಾಟ ಕಡಿಮೆ ಆಗುತ್ತಿರುವುದರಿಂದ ಹೂಡಿಕೆ ಮೊತ್ತದಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದೆ. ‘ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ’ ಎಂದು ಕಂಪನಿಯ ಸಿಎಫ್‌ಒ ನಿರಂಜನ್‌ ಗುಪ್ತಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)