ಭಾನುವಾರ, ಜೂನ್ 13, 2021
26 °C

ಮೇ 24ರಿಂದ ಎಲ್ಲಾ ಘಟಕಗಳಲ್ಲಿಯೂ ತಯಾರಿಕೆ: ಹೀರೊ ಮೊಟೊಕಾರ್ಪ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೀರೊ ಮೊಟೊಕಾರ್ಪ್‌ ಕಂಪನಿಯು ಸೋಮವಾರದಿಂದ ಕ್ರಮೇಣ ತನ್ನೆಲ್ಲಾ ಘಟಕಗಳಲ್ಲಿ ಮತ್ತೆ ತಯಾರಿಕೆಯನ್ನು ಆರಂಭಿಸುವುದಾಗಿ ಶನಿವಾರ ತಿಳಿಸಿದೆ.

ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದಾಗಿ ಈಚೆಗಷ್ಟೇ ಕಂಪನಿಯು ಗುರುಗ್ರಾಮ, ಹರಿದ್ವಾರ ಮತ್ತು ಧರುಹೆರಾ ಘಟಕಗಳಲ್ಲಿ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಅಲ್ಲದೆ, ತನ್ನೆಲ್ಲಾ ಆರು ಘಟಕಗಳಲ್ಲಿ ಏಪ್ರಿಲ್‌ 22ರಿಂದ ಮೇ 16ರವರೆಗೆ ಹಂತ ಹಂತವಾಗಿ ತಯಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.

ದೇಶಿ ಮಾರುಕಟ್ಟೆಗಾಗಿ ತಯಾರಿಕೆ ಮಾಡುವುದಷ್ಟೇ ಅಲ್ಲದೆ, ಜಾಗತಿಕ ಮಾರುಕಟ್ಟೆಯ ಕಡೆಗೂ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು