ಮಂಗಳವಾರ, ಜೂನ್ 15, 2021
23 °C

‘ಭಾರಿ ಮೊತ್ತದ ವಹಿವಾಟು ಉಲ್ಲೇಖಿಸಬೇಕಿಲ್ಲ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡುವವರು ತಮ್ಮ ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ, ಭಾರಿ ಮೊತ್ತದ ವಹಿವಾಟುಗಳ ಬಗ್ಗೆ ಉಲ್ಲೇಖಿಸುವ ಅಗತ್ಯ ಇಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಅವುಗಳನ್ನು ಉಲ್ಲೇಖಿಸಬೇಕು ಎಂಬ ನಿಯಮ ರೂಪಿಸುವ ಪ್ರಸ್ತಾವ ಇಲಾಖೆಯ ಮುಂದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಹೊಟೆಲ್‌ಗಳಲ್ಲಿ ₹ 20 ಸಾವಿರಕ್ಕಿಂತ ಹೆಚ್ಚು, ₹ 50 ಸಾವಿರಕ್ಕಿಂತ ಹೆಚ್ಚಿನ ಜೀವ ವಿಮೆ ಕಂತು, ₹ 20 ಸಾವಿರಕ್ಕಿಂತ ಹೆಚ್ಚಿನ ಆರೋಗ್ಯ ವಿಮೆ ಕಂತು, ಶಾಲೆ ಅಥವಾ ಕಾಲೇಜು ಶುಲ್ಕ ಮತ್ತು ಡೊನೇಷನ್‌ ರೂಪದಲ್ಲಿ ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿದ್ದನ್ನು ರಿಟರ್ನ್ಸ್‌ ಸಲ್ಲಿಸುವಾಗ ಉಲ್ಲೇಖಿಸಬೇಕಾಗುತ್ತದೆ’ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಸ್ಪಷ್ಟನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.