ಅಮೆರಿಕದ ಸರಕಿಗೆ ಸುಂಕಜಾರಿ ಅವಧಿ ವಿಸ್ತರಣೆ

7

ಅಮೆರಿಕದ ಸರಕಿಗೆ ಸುಂಕಜಾರಿ ಅವಧಿ ವಿಸ್ತರಣೆ

Published:
Updated:

ನವದೆಹಲಿ: ಅಮೆರಿಕದ 29 ಸರಕುಗಳಿಗೆ ಭಾರತ ಸರ್ಕಾರ ವಿಧಿಸಿರುವ ಗರಿಷ್ಠ ಆಮದು ಸುಂಕವು ಸೆಪ್ಟೆಂಬರ್‌ 18 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಜೂನ್‌ನಲ್ಲಿ ಹೊರಡಿಸಿದ್ದ ಅಧಿಸೂಚನೆಯಂತೆ ಶನಿವಾರದಿಂದ (ಆಗಸ್ಟ್‌ 4) ಸುಂಕ ಅನ್ವಯವಾಗಬೇಕಿತ್ತು. ಆದರೆ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಉಭಯ ದೇಶಗಳ ಮಧ್ಯೆ ಸಕಾರಾತ್ಮಕ ಮಾತುಕತೆ ನಡೆಯುತ್ತಿರುವುದರಿಂದ ಜಾರಿ ಅವಧಿಯನ್ನು 45ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಮಾರ್ಚ್ 9 ರಂದು ಉಕ್ಕು ಮತ್ತು ಅಲ್ಯುಮಿನಿಯಂ ಸರಕುಗಳ ಮೇಲೆ ಗರಿಷ್ಠ ಸುಂಕ ವಿಧಿಸುವ ನಿರ್ಧಾರ ಘೋಷಿಸಿದರು.

ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಬೇಳೆಕಾಳು, ಕಬ್ಬಿಣ, ಉಕ್ಕು ಉತ್ಪನ್ನಗಳನ್ನೂ ಒಳಗೊಂಡು ಅಮೆರಿಕದಿಂದ ಆಮದಾಗುವ ಒಟ್ಟು 29 ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !