ಮಂಗಳವಾರ, ಮಾರ್ಚ್ 21, 2023
28 °C

ಹಿಟಾಚಿ ಸಿಆರ್‌ಎಂ ತಯಾರಿಕಾ ಘಟಕ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಟಾಚಿ ಟರ್ಮಿನಲ್‌ ಸಲ್ಯೂಷನ್ಸ್ ಇಂಡಿಯಾ ಕಂಪನಿಯು ಕ್ಯಾಶ್ ರೀಸೈಕ್ಲಿಂಗ್‌ ಮೆಷಿನ್ (ಸಿಆರ್‌ಎಂ) ತಯಾರಿಸುವ ಘಟಕಕ್ಕೆ ಬೆಂಗಳೂರು ಸಮೀಪದ ತಮ್ಮಶೆಟ್ಟಿಹಳ್ಳಿಯಲ್ಲಿ ಶುಕ್ರವಾರ ಚಾಲನೆ ನೀಡಿದೆ.

ಇದು ಹಿಟಾಚಿ ಕಂಪನಿಯು ಜಗತ್ತಿನ ಯಾವುದೇ ಭಾಗದಲ್ಲಿ ಆರಂಭಿಸಿರುವ ಅತಿದೊಡ್ಡ ಘಟಕಗಳಲ್ಲಿ ಒಂದಾಗಿದೆ. ಸಿಆರ್‌ಎಂ ಯಂತ್ರ ಬಳಸಿ ನಗದು ಜಮಾ ಮಾಡಲು, ನಗದನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. 11 ಲಕ್ಷ ಸಿಆರ್‌ಎಂ ಯಂತ್ರಗಳಿಗೆ 2024ರ ಮೊದಲು ಜಾಗತಿಕವಾಗಿ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬುದು ಕಂಪನಿಯ ಲೆಕ್ಕಾಚಾರ.

ಬೆಂಗಳೂರು ಸಮೀಪ ಆರಂಭವಾಗಿರುವ ಘಟಕದ ಮೂಲಕ ಒಟ್ಟು 400 ಜನರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹಿಟಾಚಿ ತಿಳಿಸಿದೆ. ಈ ಘಟಕದ ನೆರವಿನಿಂದಾಗಿ ಪ್ರತಿ ತಿಂಗಳು ಒಟ್ಟು 3,000 ಸಿಆರ್‌ಎಂ ತಯಾರಿಸುವ ಸಾಮರ್ಥ್ಯ ಕಂಪನಿಗೆ ಸಿಗಲಿದೆ.

ದೇಶದಲ್ಲಿ ಸಿಆರ್‌ಎಂ ಯಂತ್ರಗಳಿಗೆ ಮುಂದಿನ ದಿನಗಳಲ್ಲಿ ಎಷ್ಟು ಬೇಡಿಕೆ ಸೃಷ್ಟಿಯಾಗಬಹುದು ಎಂಬ ಪ್ರಶ್ನೆಗೆ ಹಿಟಾಚಿ ಪೇಮೆಂಟ್‌ ಸರ್ವಿಸಸ್‌ ವ್ಯವಸ್ಥಾಪಕ ನಿರ್ದೇಶಕ ರುಸ್ತುಂ ಇರಾನಿ ಅವರು, ‘ಭಾರತದಲ್ಲಿ ಪ್ರತಿ 5,453 ಜನರಿಗೆ ಒಂದು ಎಟಿಎಂ/ಸಿಆರ್‌ಎಂ ಯಂತ್ರ ಲಭ್ಯವಿದೆ. ಹೀಗಾಗಿ ದೇಶದಲ್ಲಿ ಬೇಡಿಕೆ ಹೆಚ್ಚಲು ಅವಕಾಶವಿದೆ’ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.