ಮೂರು ತಿಂಗಳಲ್ಲಿ 5 ಲಕ್ಷ ವಾಹನ ಮಾರಾಟ ಮಾಡಿದ ಹೋಂಡಾ ಕಂಪನಿ

7

ಮೂರು ತಿಂಗಳಲ್ಲಿ 5 ಲಕ್ಷ ವಾಹನ ಮಾರಾಟ ಮಾಡಿದ ಹೋಂಡಾ ಕಂಪನಿ

Published:
Updated:

ಬೆಂಗಳೂರು: ಹೋಂಡಾ ಮೋಟರ್‌ ಸೈಕಲ್ ಆ್ಯಂಡ್‌ ಸ್ಕೂಟರ್‌ ಇಂಡಿಯಾ, ಏಪ್ರಿಲ್‌–ಜೂನ್‌ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ 5 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ. ಇಲ್ಲಿ ಒಟ್ಟಾರೆ 1 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ.

ದಕ್ಷಿಣ ಭಾರತದಲ್ಲಿ ಕರ್ನಾಟಕ ಪ್ರಮುಖ ಮಾರುಕಟ್ಟೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ 1.1 ಲಕ್ಷ ವಾಹನಗಳು ಮಾರಾಟವಾಗಿವೆ.

‘ಬೇಡಿಕೆ ಹೆಚ್ಚುತ್ತಿರುವುದರಿಂದ ನರಸಾಪುರದಲ್ಲಿನ ಘಟಕದ ತಯಾರಿಕಾ ಸಾಮರ್ಥ್ಯ ಹೆಚ್ಚಿಸಲಾಗಿದೆ’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ಯದುವೀಂದ್ರ ಸಿಂಗ್‌ ಗುಲೇರಿಯಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !