ಶುಕ್ರವಾರ, ನವೆಂಬರ್ 15, 2019
21 °C

ಹೋಂಡಾ: ಸೀಮಿತ ಆವೃತ್ತಿಯ ಆ್ಯಕ್ಟಿವಾ 5ಜಿ, ಸಿಬಿ ಶೈನ್‌ ಪೇಟೆಗೆ

Published:
Updated:

ನವದೆಹಲಿ: ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ತನ್ನ ಹೊಸ ಆಕರ್ಷಕ ಆ್ಯಕ್ಟಿವಾ 5ಜಿ ಮತ್ತು ಸಿಬಿ ಶೈನ್‌ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಗ್ರಾಹಕರ ಬಗೆಗಿನ ನಮ್ಮ ಬದ್ಧತೆಯು ಹೋಂಡಾವನ್ನು ಅತ್ಯಂತ ವಿಶ್ವಾಸಾರ್ಹ ದ್ವಿಚಕ್ರ ವಾಹನ ಬ್ರ್ಯಾಂಡ್‌ ಆಗಿ ರೂಪಿಸಿದೆ’ ಎಂದು ಸಂಸ್ಥೆಯ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಯದುವೇಂದ್ರ ಸಿಂಗ್‌ ಗುಲೇರಿಯಾ ತಿಳಿಸಿದ್ದಾರೆ.

ಸೀಮಿತ ಆವೃತ್ತಿಯ ಆ್ಯಕ್ಟಿವಾ 5ಜಿ ಹತ್ತು ಹೊಸ ಪ್ರೀಮಿಯಂ ಶೈಲಿಯನ್ನು ಹೆಚ್ಚುವರಿಯಾಗಿ ಹೊಂದಿದೆ. ಆ್ಯಕ್ಟಿವಾ 5ಜಿ ಮತ್ತು ಸಿಬಿ ಶೈನ್‌ ಎರಡು ಪ್ರತ್ಯೇಕ ಬಣ್ಣಗಳಲ್ಲಿ ಲಭ್ಯ ಇರಲಿವೆ. ಆ್ಯಕ್ಟಿವಾ 5ಜಿ ದೆಹಲಿ ಎಕ್ಸ್‌ಷೋರೂಂ ಬೆಲೆ ₹ 55,032 ಮತ್ತು  ಸಿಬಿ ಶೈನ್‌ ಬೆಲೆ ₹59,083 ರಿಂದ ಆರಂಭವಾಗುತ್ತದೆ.

ಪ್ರತಿಕ್ರಿಯಿಸಿ (+)