ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 1ರಿಂದ ಹೋಂಡಾ ಕಾರ್ಸ್‌ ಬೆಲೆ ಏರಿಕೆ

Last Updated 16 ಜೂನ್ 2019, 19:21 IST
ಅಕ್ಷರ ಗಾತ್ರ

ನವದೆಹಲಿ: ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಜುಲೈನಿಂದ ಜಾರಿಗೆ ಬರುವಂತೆ ತನ್ನೆಲ್ಲಾ ವಾಹನಗಳ ಬೆಲೆಯನ್ನು ಶೇ 1.2ರಷ್ಟು ಹೆಚ್ಚಿಸುವುದಾಗಿ ಹೇಳಿದೆ.

‘ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ಮತ್ತು ಹೊಸ ಸುರಕ್ಷತಾ ಕ್ರಮಗಳನ್ನು ಪರಿಚಯಿಸುತ್ತಿರುವುದರಿಂದ ಬೆಲೆ ಏರಿಕೆ ನಿರ್ಧಾರಕ್ಕೆ ಬರಲಾಗಿದೆ’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯಲ್‌ ತಿಳಿಸಿದ್ದಾರೆ.

ಕಂಪನಿಯು ಸದ್ಯಕ್ಕೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಬ್ರಿಯೊದಿಂದ ಪ್ರೀಮಿಯಂ ಸೆಡಾನ್‌ ಅಕಾರ್ಡ್‌ ಹೈಬ್ರಿಡ್‌ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಈ ವರ್ಷದಲ್ಲಿ ಎರಡನೇ ಬಾರಿಗೆ ಬೆಲೆಯಲ್ಲಿ ಏರಿಕೆ ಮಾಡಿದೆ. ಫೆಬ್ರುವರಿಯಿಂದ ಜಾರಿಗೆ ಬರುವಂತೆ ಕೆಲವು ಮಾದರಿಗಳ ಬೆಲೆಯನ್ನು ₹ 10 ಸಾವಿರದವರೆಗೂ ಏರಿಕೆ ಮಾಡಿತ್ತು. ಜನವರಿಯಲ್ಲಿ ಹಲವು ವಾಹನ ತಯಾರಿಕಾ ಕಂಪನಿಗಳು ಬೆಲೆ ಏರಿಕೆ ನಿರ್ಧಾರ ಕೈಗೊಂಡಿದ್ದವು. ಮಾರುತಿ ಸುಜುಕಿ ಇಂಡಿಯಾ₹ 10 ಸಾವಿರದವರೆಗೂ ಬೆಲೆ ಏರಿಕೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT