ಹೋಂಡಾ ಕಂಪನಿಗೆ 1.5 ಕೋಟಿ ಗ್ರಾಹಕರು

ಬೆಂಗಳೂರು: ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಯಾದ ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ದೇಶದ ದಕ್ಷಿಣ ವಲಯದಲ್ಲಿ 2001ರಿಂದ ಇದುವರೆಗೆ ಒಟ್ಟು 1.5 ಕೋಟಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಮೈಲಿಗಲ್ಲು ಕ್ರಮಿಸಿದೆ.
ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಅಂಡಮಾನ್ ಕೇಂದ್ರಾಡಳಿತ ಪ್ರದೇಶವು ಕಂಪನಿಯ ದಕ್ಷಿಣ ವಲಯದಲ್ಲಿ ಬರುತ್ತವೆ. 2001ರಲ್ಲಿ ಕಂಪನಿಯು ತನ್ನ ಆ್ಯಕ್ಟಿವಾ ಮಾದರಿಯ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಮೊದಲ 75 ಲಕ್ಷ ವಾಹನಗಳನ್ನು ಮಾರಾಟ ಮಾಡಲು ಹದಿನೈದು ವರ್ಷಗಳು ಬೇಕಾಗಿದ್ದವು.
ನಂತರದ 75 ಲಕ್ಷ ವಾಹನಗಳ ಮಾರಾಟವನ್ನು ಕಂಪನಿಯು ಐದೇ ವರ್ಷಗಳಲ್ಲಿ ಸಾಧ್ಯವಾಗಿಸಿದೆ ಎಂದು ಪ್ರಕಟಣೆ ಹೇಳಿದೆ. ‘ಹೋಂಡಾ ಕಂಪನಿಯ ವಾಹನ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಾವು 1.5 ಕೋಟಿ ಗ್ರಾಹಕರಿಗೆ ಧನ್ಯವಾದ ಸಮರ್ಪಿಸುತ್ತಿದ್ದೇವೆ. ಗ್ರಾಹಕರು ನಮ್ಮ ಮೇಲೆ ಇರಿಸಿರುವ ಈ ವಿಶ್ವಾಸದ ಕಾರಣದಿಂದಾಗಿಯೇ ಕಳೆದ ಎರಡು ದಶಕಗಳ ಅವಧಿಯಲ್ಲಿ ಕಂಪನಿಯು ದಕ್ಷಿಣ ವಲಯದಲ್ಲಿ ನಂಬರ್ 1 ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಯದುವೇಂದ್ರ ಸಿಂಗ್ ಗುಲೇರಿಯಾ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.