ದೇಶದಲ್ಲಿನ ಕುಟುಂಬಗಳು ಷೇರುಪೇಟೆಯ ಉತ್ಪನ್ನಗಳ ಮೂಲಕ ಹೂಡಿಕೆ ಮಾಡಿದ ಒಟ್ಟು ಮೊತ್ತವು 2024–25ರ ಆರ್ಥಿಕ ವರ್ಷದಲ್ಲಿ ₹6.91 ಲಕ್ಷ ಕೋಟಿಗೆ ಜಿಗಿದಿದೆ. 2023–24ರಲ್ಲಿ ಇದು ₹3.58 ಲಕ್ಷ ಕೋಟಿಯಷ್ಟಿತ್ತು.

ಉಳಿತಾಯ ಮತ್ತು ಜಿಡಿಪಿ ನಡುವಿನ ಅನುಪಾತವು ಶೇ 34.47ರಿಂದ ಶೇ 34.94ಕ್ಕೆ ಏರಿಕೆಯಾಗಿದೆ.

ಕುಟುಂಬಗಳು ಹಣವನ್ನು ಉಳಿಸಲು ಷೇರುಪೇಟೆಯು ನಿರ್ಣಾಯಕವಾಗಿದೆ. ಚಿನ್ನ ಮತ್ತು ರಿಯಲ್ ಎಸ್ಟೇಟ್ನಂತಹ ಸಾಂಪ್ರದಾಯಿಕ ಆಸ್ತಿಗಳಿಗೆ, ಆಕರ್ಷಕ ಪರ್ಯಾಯ ಹೂಡಿಕೆಗಳಾಗಿ ಹೊರಹೊಮ್ಮುತ್ತಿದೆ ಎಂದು ಲೇಖನ ಸಿದ್ಧಪಡಿಸಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನ ಮತ್ತು ರಿಯಲ್ ಎಸ್ಟೇಟ್ನಂತಹ ಭೌತಿಕ ಆಸ್ತಿಗಳು ಸಾಂಪ್ರದಾಯಿಕವಾಗಿ ಆದ್ಯತೆ ಪಡೆದಿದ್ದರೂ, ಹೆಚ್ಚಿನ ಗಳಿಕೆಯಿಂದ ಈ ಸ್ವತ್ತುಗಳು ಹೆಚ್ಚಿನ ಜನಪ್ರಿಯತೆ ಪಡೆದಿವೆ.

ಹೂಡಿಕೆಯ ಮೇಲಿನ ತೆರಿಗೆ ಪ್ರೋತ್ಸಾಹ, ಹಣಕಾಸು ಒಳಗೊಳ್ಳುವಿಕೆ ಕಾರ್ಯಕ್ರಮಗಳು, ಡಿಜಿಟಲ್ ಬ್ಯಾಂಕಿಂಗ್ನಂತಹ ಸರ್ಕಾರದ ಕ್ರಮಗಳು ದೇಶದಲ್ಲಿನ ಕುಟುಂಬಗಳು ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಉತ್ತೇಜನ ನೀಡಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದೊಂದಿಗೆ ಸಮಾಲೋಚಿಸಿ ಸೆಬಿ ಕೈಗೊಂಡ ಭಾರತದ ಷೇರುಪೇಟೆಯ ಮೂಲಕ ಕುಟುಂಬದ ಉಳಿತಾಯವನ್ನು ವರದಿ ಒಳಗೊಂಡಿದೆ. ಈ ಅಧ್ಯಯನಕ್ಕೆ 2022–23ರ ಮೂಲ ವರ್ಷ ಆಧಾರವಾಗಿದೆ.

ಶೇ 2.17;2024-25ರಲ್ಲಿ ಷೇರುಪೇಟೆಯ ಮೂಲಕ ಕುಟುಂಬಗಳ ಉಳಿತಾಯವು ಜಿಡಿಪಿಯ ಶೇ 2.17ರಷ್ಟಿದೆ. 2023–24ರಲ್ಲಿ ಶೇ 1.71 ರಷ್ಟಿತ್ತು.

₹141 ಲಕ್ಷ ಕೋಟಿ;ಈಕ್ವಿಟಿ, ಮ್ಯೂಚುವಲ್ ಫಂಡ್, ಸಾಲ ಪತ್ರದ ಮಾರುಕಟ್ಟೆ, ಆರ್ಇಐಟಿ, ಇನ್ವಿಟ್ಸ್, ಪರ್ಯಾಯ ಹೂಡಿಕೆ ನಿಧಿಯಲ್ಲಿನ ಕುಟುಂಬಗಳ ಸಂಪತ್ತಿನ ಅಂದಾಜು ಮೊತ್ತ

Highlights -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.