ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 47ರಷ್ಟು ಕುಸಿಯಲಿರುವ ಮನೆಗಳ ಮಾರಾಟ

Last Updated 21 ಡಿಸೆಂಬರ್ 2020, 14:17 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಏಳು ಪ್ರಮುಖ ನಗರಗಳಲ್ಲಿನ ಮನೆಗಳ ಮಾರಾಟವು ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ವರ್ಷ ಶೇಕಡ 47ರಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ. ಕೋವಿಡ್–19 ಸಾಂಕ್ರಾಮಿಕದಿಂದಾಗಿ ವಸತಿ ಕಟ್ಟಡಗಳಿಗೆ ಬೇಡಿಕೆ ತಗ್ಗಿದ್ದು ಇದಕ್ಕೆ ಕಾರಣ ಎಂದು ಅನರಾಕ್‌ ಸಂಸ್ಥೆ ಹೇಳಿದೆ.

ವಸತಿ ಮಾರುಕಟ್ಟೆ ಪ್ರವೇಶಿಸುವ ಹೊಸ ಮನೆಗಳ ಸಂಖ್ಯೆಯಲ್ಲಿ ಕೂಡ ಶೇಕಡ 46ರಷ್ಟು ಇಳಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ. ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತದಲ್ಲಿನ ವಸತಿ ಮಾರುಕಟ್ಟೆಯನ್ನು ಆಧರಿಸಿ ಸಂಸ್ಥೆ ಈ ಮಾತು ಹೇಳಿದೆ.

2019ರಲ್ಲಿ ಈ ಏಳು ನಗರಗಳಲ್ಲಿ ಒಟ್ಟು 2.61 ಲಕ್ಷ ಮನೆಗಳ ಮಾರಾಟ ಆಗಿತ್ತು. ಆದರೆ, ಈ ವರ್ಷದಲ್ಲಿ ಈ ನಗರಗಳಲ್ಲಿ ಒಟ್ಟು 1.38 ಲಕ್ಷ ಮನೆಗಳ ಮಾರಾಟ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದು ವರ್ಷಾಂತ್ಯಕ್ಕೆ ಇನ್ನೂ 10 ದಿನಗಳು ಇರುವಾಗ ಬಿಡುಗಡೆ ಮಾಡಿರುವ ವರದಿಯಲ್ಲಿ ಅನರಾಕ್‌ ಹೇಳಿದೆ.

ಹಿಂದಿನ ವರ್ಷದಲ್ಲಿ ಒಟ್ಟು 2.37 ಲಕ್ಷ ಮನೆಗಳು ಖರೀದಿಗೆ ಹೊಸದಾಗಿ ಲಭ್ಯವಿದ್ದವು. ಆದರೆ, ಈ ವರ್ಷ ಹೊಸ ಮನೆಗಳ ಪೂರೈಕೆಯು 1.28 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಸತಿ ಕಟ್ಟಡಗಳ ಮಾರುಕಟ್ಟೆಯು ಅಕ್ಟೋಬರ್‌–ಡಿಸೆಂಬರ್ ಅವಧಿಯಲ್ಲಿ ಚೇತರಿಕೆ ಕಂಡುಕೊಂಡಿರುವ ಲಕ್ಷಣಗಳು ಕಾಣುತ್ತಿವೆ ಎಂದು ಅದು ಹೇಳಿದೆ.

‘ಕೋವಿಡ್–19 ಕಾರಣದಿಂದಾಗಿ 2020 ಎಂಬುದು ಹಿಂದೆಂದೂ ಕಾಣದಿದ್ದಂತಹ ವರ್ಷವಾಗಿತ್ತು. ಹೀಗಿದ್ದರೂ, ವಸತಿ ಕಟ್ಟಡಗಳ ಮಾರುಕಟ್ಟೆಯು ವರ್ಷದ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ಚೇತರಿಕೆ ಕಂಡುಕೊಂಡಿದೆ’ ಎಂದು ಅನರಾಕ್‌ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

51%:ಬೆಂಗಳೂರಿನಲ್ಲಿ ಮನೆಗಳ ಮಾರಾಟದಲ್ಲಿ ಆಗಲಿರುವ ಕುಸಿತದ ಅಂದಾಜು

24,910:2020ರಲ್ಲಿ ಬೆಂಗಳೂರಿನಲ್ಲಿ ಮನೆಗಳ ಒಟ್ಟು ಮಾರಾಟ

50,450:2019ರಲ್ಲಿ ಬೆಂಗಳೂರಿನಲ್ಲಿ ಆಗಿದ್ದ ಮನೆಗಳ ಒಟ್ಟು ಮಾರಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT