ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರದಲ್ಲಿ ಗುರುವಾರ ರಾತ್ರಿವರೆಗೂ ₹102.73 ಇದ್ದ ಪೆಟ್ರೋಲ್, ಶುಕ್ರವಾರ ಬೆಳ್ಳಂಬೆಳಿಗ್ಗೆ ₹105.99 ಏರಿಕೆಯಾಗಿದೆ. ₹90.84 ಇದ್ದ ಡೀಸೆಲ್, ₹93.96ಕ್ಕೆ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಕ್ರಮವಾಗಿ ₹3.26 ಹಾಗೂ ₹3.12 ಹೆಚ್ಚಳವಾಗಿದೆ.

ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಯು ಕೆಲವು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದರೆ, ಕೆಲವು ಗ್ರಾಹಕರು ‘ಇದು ನಿರೀಕ್ಷಿತ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಬಂಕ್ಗಳಲ್ಲಿ ಶುಕ್ರವಾರ ಗ್ರಾಹಕರು ಎಂದಿನಂತೆ ಕಂಡು ಬಂದರು. ಕೆಲವರು ಸಂಚಾರಕ್ಕೆ ಅಗತ್ಯವಿದ್ದಷ್ಟು ಮಾತ್ರ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ತುಂಬಿಸಿಕೊಂಡರು.

‘ಈಗಾಗಲೇ ಅಕ್ಕಿ, ಬೇಳೆ, ಎಣ್ಣೆ ದರ ಸಹ ನಿಧಾನವಾಗಿ ಏರಿಕೆಯಾಗುತ್ತಿರುವುದರಿಂದ ಬಡ, ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆಯೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು, ಮತ್ತೆ ದೈನಂದಿನ ಬದುಕಿನ ಮೇಲೆ ಪೆಟ್ಟು ಬಿದ್ದಿದೆ. ತೈಲ ಬೆಲೆ ಏರಿಕೆಯಾದರೆ, ಪ್ರತಿಯೊಂದು ವಸ್ತುವಿನ ಬೆಲೆಯೂ ಏರಿಕೆಯಾಗುತ್ತದೆ.ಸಾಮಾನ್ಯ ವರ್ಗದವರು ಬೀದಿಗೆ ಬರುವ ಪರಿಸ್ಥಿತಿ ಎದುರಾಗಲಿದೆ. ಆಳುವ ವರ್ಗದವರು ಬಡವರ ಬದುಕನ್ನು ಸಹ ಗಮನಿಸಬೇಕು’ ಎಂದು ಕೇಶ್ವಾಪುರದ ನಿವಾಸಿ ಫಕ್ಕಿರೇಶ ಮಲಕವಾಡಿ ಹೇಳಿದರು.

ಬೈರಿದೇವರಕೊಪ್ಪದ ನಿವಾಸಿ, ಟ್ಯಾಕ್ಸಿ ಚಾಲಕ ಅಮರ ಗಾಯಕವಾಡಿ ಅವರು ತೈಲ ಬೆಲೆ ಏರಿಕೆಯ ಪರಿಣಾಮದ ಕುರಿತು ಮಾತನಾಡಿ, ‘ಟ್ಯಾಕ್ಸಿಯನ್ನು ಬಾಡಿಗೆ ಓಡಿಸಿ, ಇಎಂಐ ಪಾವತಿಸುತ್ತ, ಉಳಿದ ಅಲ್ಪಸ್ವಲ್ಪ ಹಣದಲ್ಲಿ ಕುಟುಂಬ ನಿರ್ವಹಣೆಯಾಗುತ್ತಿತ್ತು. ಈಗಲೇ ಟ್ಯಾಕ್ಸಿ ಬಾಡಿಗೆ ದರ ಹೆಚ್ಚು ಎಂದು ಪ್ರವಾಸಕ್ಕೆ ತೆರಳುವವರು ಕಡಿಮೆಯಾಗಿದ್ದಾರೆ. ಈಗ ಬಾಡಿಗೆ ಮತ್ತಷ್ಟು ಹೆಚ್ಚಳವಾಗುವುದರಿಂದ, ಪ್ರವಾಸಕ್ಕೆ ಹೋಗುವುದನ್ನೇ ಮೊಟಕುಗೊಳಿಸುತ್ತಾರೆ. ನಮ್ಮಂತವರ ಬದುಕು ದುಸ್ತರವಾಗಲಿದೆ’ ಎಂದು ಹೇಳಿದರು.

‘ಎರಡು, ಮೂರು ವಾರಗಳ ಹಿಂದೆಯೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಕೇಂದ್ರ ಸರ್ಕಾರ ಅಳೆದು, ತೂಗಿ ಈಗ ಹೆಚ್ಚಳ ಮಾಡಿದೆ. ದರ ಹೆಚ್ಚಳ ನಿರೀಕ್ಷಿತವೇ ಹೊರತು, ಅನಿರೀಕ್ಷಿತವೇನಲ್ಲ. ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರೂ, ನಂತರ ನಿಧಾನವಾಗಿ ಸಾರ್ವಜನಿಕರು ಒಗ್ಗಿಕೊಳ್ಳುತ್ತಾರೆ ಎನ್ನುವುದು ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ತಿಳಿದಿದೆ’ ಎಂದು ವಿದ್ಯಾನಗರದ ಕಿರಾಣಿ ವ್ಯಾಪಾರಿ ಸಂಗಮೇಶ ಬೂದಿಹಾಳ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-24-1245490945

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.