ಹುಬ್ಬಳ್ಳಿ: ಪಶ್ಚಿಮ ಏಷ್ಯಾ ಯದ್ಧದ ಪರಿಣಾಮ ವಾಣಿಜ್ಯ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು, ಕೆಲವು ಸಣ್ಣ ಹೋಟೆಲ್ ಹಾಗೂ ಕ್ಯಾಂಟೀನ್ಗಳು ಬಾಗಿಲು ಮುಚ್ಚಿವೆ. ‘ಗ್ಯಾಸ್ ಸಿಲಿಂಡರಿನ ಕೊರತೆಯಿಂದಾಗಿ ಹೋಟೆಲ್ ರಜೆ ಇರುತ್ತದೆ’ ಎಂದು ಶೆಟರ್ಸ್ಗೆ ಪೋಸ್ಟರ್ ಅಂಟಿಸಿವೆ.

ಒಂದು ವಾರದ ಹಿಂದೆಯೇ ಸಿಲಿಂಡರ್ ಪೂರೈಕೆಯನ್ನು ಕಡಿಮೆ ಮಾಡಲಾಗಿತ್ತು. ದಿನಕ್ಕೆ ಮೂರು, ನಾಲ್ಕು ಅನಿಲದ ಸಿಲಿಂಡರ್ ಅಗತ್ಯವಿದ್ದವರಿಗೆ ಏಜೆನ್ಸಿಯವರು ಒಂದು, ಎರಡು ಸಿಲಿಂಡರ್ಗಳನ್ನಷ್ಟೇ ಪೂರೈಸುತ್ತಿದ್ದರು. ಸಣ್ಣ ಹೋಟೆಲ್ನವರಿಗೆ ಎರಡು, ಮೂರು ದಿನಕ್ಕೆ ಒಂದೊಂದು ಅನಿಲದ ಸಿಲಿಂಡರ್ ಪೂರೈಕೆಯಾಗುತ್ತಿದ್ದು, ಅದರಲ್ಲಿಯೇ ಇಷ್ಟು ದಿನ ಉದ್ಯಮ ನಡೆಸಿದ್ದರು. ಇದೀಗ ಅದು ಸಹ ಸ್ಥಗಿತವಾಗಿದ್ದರಿಂದ ಸಣ್ಣ ಹೋಟೆಲ್, ಕ್ಯಾಂಟೀನ್ಗಳನ್ನು ಮುಚ್ಚಿದ್ದಾರೆ.

ಹಳೇಹುಬ್ಬಳ್ಳಿ, ಆನಂದನಗರ, ಕೇಶ್ವಾಪುರ, ಅಶೋಕನಗರ, ವಿದ್ಯಾನಗರ, ಶಿರೂರ ಪಾರ್ಕ್, ಕುಸಗಲ್ ರಸ್ತೆ, ಕಾರವಾರ ರಸ್ತೆ, ವಿದ್ಯಾನಗರ ಸೇರಿದಂತೆ ವಿವಿಧೆಡೆ ಇರುವ ಕೆಲವು ಸಣ್ಣ ಹೋಟೆಲ್ಗಳನ್ನು ಬಂದ್ ಮಾಡಲಾಗಿದೆ. ಕೆಲವರು ಟೀ, ಅವಲಕ್ಕಿ, ಚೂಡಾ, ಬ್ರೆಡ್ಗಳನ್ನಷ್ಟೇ ಇಟ್ಟುಕೊಂಡು ಬೆಳಿಗ್ಗೆ ಮತ್ತು ಸಂಜೆ ವ್ಯಾಪಾರ ಮಾಡುತ್ತಿದ್ದಾರೆ.

‘ಅನಿಲದ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ನಂತರದ ಕೆಲವು ದಿನ ಹಾಗೋ, ಹೀಗೋ ಅನಿಲದ ಸಿಲಿಂಡರ್ ಖರೀದಿಸಿ ಹೋಟೆಲ್ ನಡೆಸಿದೆವು. ಇದೀಗ ಹೆಚ್ಚಿನ ಹಣ ನೀಡುತ್ತೇವೆ ಎಂದರೂ ಎಲ್ಲಿಯೂ ದೊರೆಯುತ್ತಿಲ್ಲ. ಇನ್ನೂ ಒಂದು ವಾರ ಹೀಗೆಯೇ ಸಮಸ್ಯೆ ಎನ್ನುತ್ತಿದ್ದಾರೆ. ಹೀಗಾಗಿ ಹೋಟೆಲ್ಗೆ ಬೀಗ ಹಾಕಿದ್ದೇವೆ’ ಎಂದು ವಿದ್ಯಾನಗರದ ಪ್ರದೀಪ ಕ್ಯಾಂಟೀನ್ ಮಾಲೀಕ ಪ್ರದೀಪ ಹೇಳಿದರು.

30ರಿಂದ 100ರಷ್ಟು ಕಾರ್ಮಿಕರು ಇರುವ ಹಾಗೂ ಐಷಾರಾಮಿ ಹೋಟೆಲ್ನವರು ಸದ್ಯ ದೊರೆಯುತ್ತಿರುವ ಅನಿಲದ ಸಿಲಿಂಡರ್ಗಳ ಜೊತೆಗೆ, ಕಟ್ಟಿಗೆ ಒಲೆ, ಎಲೆಕ್ಟ್ರಿಕಲ್ ಸ್ಟೌ ಹಾಗೂ ಇತರ ಪರ್ಯಾಯದತ್ತ ಮುಖ ಮಾಡಿದ್ದಾರೆ. ಕೆಲವರು ಕಾಳಸಂತೆಯಲ್ಲಿ ಹೆಚ್ಚಿಗೆ ಎರಡು ಸಾವಿರ ಹಣ ನೀಡಿ ಅನಿಲದ ಸಿಲಿಂಡರ್ ಖರೀದಿಸುತ್ತಿದ್ದಾರೆ ಎನ್ನುವ ಆರೋಪವೂ ಇದೆ.

‘ಆದ್ಯತೆಯ ಪಟ್ಟಿಯಲ್ಲಿ ಆಸ್ಪತ್ರೆಗಳಿಗೂ ಅನಿಲದ ಸಿಲಿಂಡರ್ ಪೂರೈಕೆ ಮಾಡಬೇಕು ಎನ್ನುವ ಷರತ್ತು ಇದೆ. ಇದನ್ನೇ ಕೆಲವರು ದುರ್ಬಳಕೆ ಮಾಡಿಕೊಂಡು, ಆಸ್ಪತ್ರೆಯ ಹೆಸರಲ್ಲಿ ಏಜೆನ್ಸಿಯವರಿಂದ ಅನಿಲದ ಸಿಲಿಂಡರ್ ಪಡೆಯುತ್ತಿದ್ದಾರೆ. ಆಹಾರ ಇಲಾಖೆ ಪರಿಶೀಲನೆ ನಡೆಸಬೇಕು’ ಎಂದು ಹುಬ್ಬಳ್ಳಿ ಹೋಟೆಲ್ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಗಾಯತೊಂಡೆ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-24-1655635627

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.