ಬುಧವಾರ, ನವೆಂಬರ್ 20, 2019
20 °C

ಹುಬ್ಬಳ್ಳಿ– ದೆಹಲಿ ನೇರ ವಿಮಾನ ಇಂದಿನಿಂದ

Published:
Updated:

ಹುಬ್ಬಳ್ಳಿ: ಸ್ಟಾರ್‌ ಏರ್‌ ಸಂಸ್ಥೆಯು ವಾರದಲ್ಲಿ ಮೂರು ದಿನ ಹುಬ್ಬಳ್ಳಿ– ಹಿಂಡನ್‌ (ದೆಹಲಿ ಹೊರವಲಯದ ಸ್ಥಳ) ನಡುವೆ ಬುಧವಾರದಿಂದ ನೇರ ವಿಮಾನಯಾನ ಸೌಲಭ್ಯ ಆರಂಭಿಸಲಿದ್ದು, ಒಂದು ದಿನ ಮೊದಲೇ ಎಲ್ಲ ಸೀಟುಗಳು ಭರ್ತಿಯಾಗಿವೆ.

ಬುಧವಾರ ಹಾಗೂ ಗುರುವಾರ ಮಧ್ಯಾಹ್ನ 1.05ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 3.45ಕ್ಕೆ ದೆಹಲಿ ತಲುಪಲಿದೆ. ಅಲ್ಲಿಂದ ಸಂಜೆ 4.10ಕ್ಕೆ ಹೊರಟು 6.50ಕ್ಕೆ ಹುಬ್ಬಳ್ಳಿಗೆ ಬರಲಿದೆ. ಶನಿವಾರ ಮಾತ್ರ ಬೆಳಿಗ್ಗೆ 11.50ಕ್ಕೆ ಹುಬ್ಬಳ್ಳಿಯಿಂದ ತೆರಳಲಿದೆ. ಬರುವ ಸಮಯದಲ್ಲಿ ಬದಲಾವಣೆಯಿಲ್ಲ. ₹3,999 ಮೂಲ ದರ ನಿಗದಿ ಮಾಡಲಾಗಿದೆ.

ಬೆಂಗಳೂರು ಮತ್ತು ಮಂಗಳೂರು ಹೊರತುಪಡಿಸಿದರೆ, ರಾಜ್ಯದ ಬೇರೆ ಯಾವ ನಗರಗಳಿಂದಲೂ ದೆಹಲಿಗೆ ನೇರ ವಿಮಾನ ಸೌಲಭ್ಯವಿಲ್ಲ. ಇಲ್ಲಿ ಈ ಸೌಲಭ್ಯ ಕಲ್ಪಿಸಿರುವುದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಲಿದೆ.

 

ಪ್ರತಿಕ್ರಿಯಿಸಿ (+)