ಹುಂಡೈ ಕಂಪನಿ | ಎಲೆಕ್ಟ್ರಿಕ್‌ ಎಸ್‌ಯುವಿ ಕೋನಾ ಬಿಡುಗಡೆ

ಭಾನುವಾರ, ಜೂಲೈ 21, 2019
22 °C
ಕಂಪನಿಯ ಮೊದಲ ವಿದ್ಯುತ್‌ ಚಾಲಿತ ವಾಹನ ಭಾರತಕ್ಕೆ

ಹುಂಡೈ ಕಂಪನಿ | ಎಲೆಕ್ಟ್ರಿಕ್‌ ಎಸ್‌ಯುವಿ ಕೋನಾ ಬಿಡುಗಡೆ

Published:
Updated:
Prajavani

ನವದೆಹಲಿ: ದಕ್ಷಿಣ ಕೊರಿಯಾದ ವಾಹನ ತಯಾರಿಕಾ ಕಂಪನಿ ಹುಂಡೈ ಸಿದ್ಧಪಡಿಸಿರುವ ಮೊದಲ ವಿದ್ಯುತ್‌ ಚಾಲಿತ (ಇವಿ) ಎಸ್‌ಯುವಿ ‘ಕೋನಾ’ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಇದರ ಬೆಲೆ ₹ 25.3 ಲಕ್ಷದಿಂದ ಆರಂಭವಾಗುತ್ತದೆ. 6 ಗಂಟೆಗಳಲ್ಲಿ ಬ್ಯಾಟರಿ ಪೂರ್ತಿಯಾಗಿ ಚಾರ್ಜ್‌ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

ಚೆನ್ನೈನಲ್ಲಿರುವ ತಯಾರಿಕಾ ಘಟಕದಲ್ಲಿ ಕೋನಾದ ಬಿಡಿಭಾಗಗಳ ಜೋಡಣೆ ನಡೆಯಲಿದೆ. ಕ್ರಮೇಣ ಬಿಡಿಭಾಗಳು ಮತ್ತು ಬ್ಯಾಟರಿ ಪ್ಯಾಕ್‌ಗಳನ್ನು ಸ್ಥಳೀಯವಾಗಿಯೇ ತಯಾರಿಸಲಾಗುವುದು. ಚಾರ್ಜಿಂಗ್‌ ವ್ಯವಸ್ಥೆ ಮತ್ತು ಬೇಡಿಕೆಯ ಆಧಾರದ ಮೇಲೆ ದೇಶದ 11 ನಗರಗಳಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗಿದೆ. ನಗರಗಳಲ್ಲಿ ಇರುವ 15 ವಿತರಣಾ ಕೇಂದ್ರಗಳಲ್ಲಿ ಚಾರ್ಜಿಂಗ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದೆ.

ದೆಹಲಿ–ರಾಜಧಾನಿ ಪ್ರದೇಶವನ್ನೂ ಒಳಗೊಂಡು ನಾಲ್ಕು ನಗರಗಳಲ್ಲಿ ಪೆಟ್ರೋಲ್‌ ಬಂಕ್‌ಗಳಲ್ಲಿ ಚಾರ್ಜಿಂಗ್ ವ್ಯವಸ್ಥೆಗಾಗಿ ಇಂಡಿಯನ್‌ ಆಯಿಲ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

‘ಕೇಂದ್ರ ಬಜೆಟ್‌ನಲ್ಲಿ ‘ಇವಿ’ ಖರೀದಿಸುವವರಿಗೆ ತೆರಿಗೆ ಉತ್ತೇಜನದಂತಹ ಸಕಾರಾತ್ಮಕ ಬೆಳವಣಿಗೆಯು ಕಂಡುಬಂದಿದೆ. ಆದರೆ ಇಂತಹ ವಾಹನಗಳ ಅಳವಡಿಕೆಗೆ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳುವ ಅಗತ್ಯವಿದೆ’ ಎಂದು ಎಚ್‌ಎಂಐಎಲ್‌ನ ಸಿಇಒ ಎಸ್‌.ಎಸ್‌. ಕಿಮ್‌ ಅಭಿಪ್ರಾಯಪಟ್ಟಿದ್ದಾರೆ.

ಎಸ್‌ಯುವಿ ವೈಶಿಷ್ಟ್ಯ

* 6 ಏರ್‌ಬ್ಯಾಗ್‌

* ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಂ

* ಎಲೆಕ್ಟ್ರಾನಿಕ್‌ ಬ್ರೇಕ್‌–ಫೋರ್ಸ್‌ ಡಿಸ್ಟ್ರಿಬ್ಯೂಷನ್‌

* ಟಯರ್‌ ಪ್ರೆಷರ್‌ ಮಾನಿಟರಿಂಗ್‌ ಸಿಸ್ಟಂ

* ರಿಯರ್‌ ಕ್ಯಾಮೆರಾ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !