ಭಾನುವಾರ, ಮೇ 29, 2022
30 °C

ಹುಂಡೈನಿಂದ ಹೊಸ ಜಾಹೀರಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಕಂಪನಿಯು ತನ್ನ ಅಲ್ಕಾಜಾರ್ ಕಾರಿಗೆ ಸಂಬಂಧಿಸಿದಂತೆ ಶಾರೂಖ್ ಖಾನ್ ಮತ್ತು ದೇಶದ ನಾಲ್ವರು ಮಹಿಳಾ ಕ್ರಿಕೆಟ್ ತಾರೆಯರನ್ನು ಒಳಗೊಂಡಿರುವ ಹೊಸ ಟಿ.ವಿ. ಜಾಹೀರಾತಿಗೆ ಚಾಲನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಮೃತಿ ಮಂದಣ್ಣ, ಜೆಮಿಮಾ ರಾಡ್ರಿಗಸ್, ತಾನಿಯಾ ಭಾಟಿಯಾ ಮತ್ತು ಶಫಾಲಿ ವರ್ಮ ಈ ಜಾಹೀರಾತಿನಲ್ಲಿ ಇರುವ ಮಹಿಳಾ ಕ್ರಿಕೆಟಿಗರು. ‘ಹೊಸ ಜಾಹೀರಾತು, ಮಿಲೆನಿಯಲ್‌ಗಳ ಆಯ್ಕೆಗಳನ್ನು ತೋರಿಸುತ್ತದೆ. ವಿಶ್ವದರ್ಜೆಯ ಉತ್ಪನ್ನಗಳ ಮೂಲಕ ಅತ್ಯುತ್ತಮವಾದುದನ್ನು ಗ್ರಾಹಕರಿಗೆ ನೀಡುವ ಹುಂಡೈನ ಬದ್ಧತೆಯನ್ನೂ ಇದು ಹೇಳುತ್ತದೆ’ ಎಂದು ಕಂಪನಿಯ ಮಾರಾಟ, ಮಾರುಕಟ್ಟೆ ಮತ್ತು ಸೇವೆಗಳ ವಿಭಾಗದ ನಿರ್ದೇಶಕ ತರುಣ್ ಗರ್ಗ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು