ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಾರುಕಟ್ಟೆಗೆ ಹುಂಡೈ ಸ್ಯಾಂಟ್ರೊ

Last Updated 23 ಅಕ್ಟೋಬರ್ 2018, 16:45 IST
ಅಕ್ಷರ ಗಾತ್ರ

ನವದೆಹಲಿ: ಹುಂಡೈ ಕಂಪನಿಯ ಸ್ಯಾಂಟ್ರೊ ಕಾರು, ಇದೀಗ ಹೊಸ ವೈಶಿಷ್ಟ್ಯಗಳೊಂದಿಗೆ ಮತ್ತೆ ದೇಶದ ಮಾರುಕಟ್ಟೆಗೆ ಕಾಲಿಟ್ಟಿದೆ.

ಹೊಸ ಕಾರು 4 ಸಿಲಿಂಡರ್‌, 1.1 ಲೀಟರ್‌ ಪೆಟ್ರೊಲ್ ಎಂಜಿನ್‌ ಹೊಂದಿದೆ. ಆಟೊಮೆಟೆಡ್‌ ಮ್ಯಾನ್ಯುಯಲ್‌ ಟ್ರಾನ್ಸ್‌ಮಿಷನ್‌ (ಎಎಂಟಿ) ಮತ್ತು ಸಿಎನ್‌ಜಿ ಇಂಧನದ ಆಯ್ಕೆ ಇದೆ.

ಇದರ ಎಕ್ಸ್‌ ಷೋರೂಂ ಬೆಲೆ₹ 3.89 ಲಕ್ಷದಿಂದ ₹ 5.46 ಲಕ್ಷದವರೆಗಿದೆ. ಮೊದಲ 50 ಸಾವಿರ ಗ್ರಾಹಕರಿಗೆ ಮಾತ್ರವೇ ಈ ಬೆಲೆಗೆ ಖರೀದಿಸುವ ಅವಕಾಶ ಇದೆ. ಈಗಾಗಲೇ 23,500 ಕಾರುಗಳಿಗೆ ಮುಂಗಡ ಬುಕಿಂಗ್‌ ನಡೆದಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT