ಸೋಮವಾರ, ಸೆಪ್ಟೆಂಬರ್ 16, 2019
29 °C

ಹುಂಡೈ ‘ವೆನ್ಯೂ’ ಬುಕಿಂಗ್‌ ಆರಂಭ

Published:
Updated:
Prajavani

ಬೆಂಗಳೂರು: ದೇಶದ ಎರಡನೆ ಅತಿದೊಡ್ಡ ಕಾರ್‌ ತಯಾರಿಕಾ ಸಂಸ್ಥೆಯಾಗಿರುವ ಹುಂಡೈ ಮೋಟರ್ ಇಂಡಿಯಾ ತಯಾರಿಸಿರುವ ಅತ್ಯಾಧುನಿಕ ಸಂವಹನ, ಸುರಕ್ಷತಾ ತಂತ್ರಜ್ಞಾನದಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಹುಂಡೈ ‘ವೆನ್ಯೂ’ದ ಬುಕಿಂಗ್‌ ಆರಂಭಗೊಂಡಿದೆ.

ಸಂಸ್ಥೆಯ ಅಂತರ್ಜಾಲ ತಾಣದಲ್ಲಿ https://bookonline.hyundai.co.in/ ಅಥವಾ ಹುಂಡೈ ಡೀಲರ್‌ಶಿಪ್‌ ಬಳಿಗೆ ತೆರಳಿ ₹ 21 ಸಾವಿರ ಮುಂಗಡ ಹಣ ಪಾವತಿಸಿ ಇದೇ 20ರವರೆಗೆ ಬುಕಿಂಗ್‌ ಮಾಡಬಹುದು.

‘ದೇಶಿ ಕಾಂಪ್ಯಾಕ್ಟ್‌ ಎಸ್‌ಯುವಿ ‘ವೆನ್ಯೂ’ ಇದೇ 21ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ದೇಶಿ ಕಾಂಪ್ಯಾಕ್ಟ್‌ ಎಸ್‌ಯುವಿ ವಲಯದಲ್ಲಿ ಹೊಸ ಆರಂಭಕ್ಕೆ ಕಾರಣವಾಗಲಿದೆ. ಗ್ರಾಹಕರಿಂದ ಈಗಾಗಲೇ ಉತ್ತೇಜಕರ ಪ್ರತಿಕ್ರಿಯೆ ದೊರೆತಿದೆ. ಜಾಗತಿಕ ಉತ್ಪನ್ನ ಮತ್ತು ತಂತ್ರಜ್ಞಾನವನ್ನು ಭಾರತದ ಗ್ರಾಹಕರಿಗೆ ಒದಗಿಸುವ ನಮ್ಮ ಬದ್ಧತೆಯ ಪ್ರತೀಕ ಇದಾಗಿದೆ’ ಎಂದು ಸಂಸ್ಥೆಯ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ವಿಕಾಸ್‌ ಜೈನ್‌ ಹೇಳಿದ್ದಾರೆ.

ಈ ಎಸ್‌ಯುವಿ ಏಳು ಆಕರ್ಷಕ ಬಣ್ಣಗಳಲ್ಲಿ ಲಭ್ಯ ಇರಲಿದೆ. ‘ವೆನ್ಯೂ’ ಮೂಲಕ, ಕೃ‌ತಕ ಬುದ್ಧಿಮತ್ತೆ ಮತ್ತು ಸಂವಹನಕ್ಕೆ ಸಂಬಂಧಿಸಿದ ಜಾಗತಿಕ ಸಂವಹನ ತಂತ್ರಜ್ಞಾನ ‘ಬ್ಲ್ಯೂಲಿಂಕ್‌’ ಪರಿಚಯಿಸಲಾಗುತ್ತಿದೆ. 

Post Comments (+)