ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ವೈತ್‌ ಹುಂಡೈನಲ್ಲಿ ‘ವೆನ್ಯೂ’ ಬಿಡುಗಡೆ

Last Updated 21 ಮೇ 2019, 17:26 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯಲ್ಲಿ ಇರುವ ಅದ್ವೈತ್‌ ಹುಂಡೈ ಷೋರೂಂನಲ್ಲಿ, ಹುಂಡೈನ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ‘ವೆನ್ಯೂ’ ಅನಾವರಣಗೊಳಿಸಲಾಗಿದೆ.

ಈ ಕಾಂಪ್ಯಾಕ್ಟ್‌ ‘ಎಸ್‌ಯುವಿ’, ಕೃ‌ತಕ ಬುದ್ಧಿಮತ್ತೆ ಮತ್ತು ಸಂವಹನದ ‘ಬ್ಲ್ಯೂಲಿಂಕ್‌’ ತಂತ್ರಜ್ಞಾನ ಒಳಗೊಂಡಿದೆ. ಮೂರು ಬಗೆಯ ಎಂಜಿನ್‌ ಆಯ್ಕೆ ಮತ್ತು ಏಳು ಆಕರ್ಷಕ ಬಣ್ಣಗಳಲ್ಲಿ ಲಭ್ಯ ಇರಲಿದೆ.

‘ವೆನ್ಯೂ’ ಅಭಿವೃದ್ಧಿಪಡಿಸಲು ಹುಂಡೈ ಕಂಪನಿಯು ನಾಲ್ಕು ವರ್ಷಗಳಲ್ಲಿ ₹ 690 ಕೋಟಿ ಹೂಡಿಕೆ ಮಾಡಿದೆ. ಪೆಟ್ರೋಲ್‌ ಚಾಲಿತ ಎಸ್‌ಯುವಿ ಬೆಲೆ (ದೆಹಲಿ ಎಕ್ಸ್‌ಷೋರೂಂ) ₹ 6.5 ಲಕ್ಷದಿಂದ ₹ 11.1 ಲಕ್ಷ ಮತ್ತು ಡೀಸೆಲ್‌ ಚಾಲಿತ ₹ 7.75 ಲಕ್ಷದಿಂದ ₹ 10.84 ಲಕ್ಷದವರೆಗೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT