ಮುಂಬೈ (ಪಿಟಿಐ): ಐಸಿಐಸಿಐ ಬ್ಯಾಂಕ್ನ ಮಾರ್ಚ್ ತ್ರೈಮಾಸಿಕದ ಲಾಭವು ಶೇ 9.28ರಷ್ಟು ಹೆಚ್ಚಳ ಕಂಡಿದ್ದು ₹14,755 ಕೋಟಿಗೆ ತಲುಪಿದೆ. ಸಂಭಾವ್ಯ ನಷ್ಟವನ್ನು ಸರಿದೂಗಿಸಲು ತೆಗೆದಿರಿಸುವ ಮೊತ್ತವು ಸರಿಸುಮಾರು ಶೇ 90ರಷ್ಟು ಇಳಿಕೆ ಆಗಿದ್ದುದು ಕೂಡ ಲಾಭದ ಹೆಚ್ಚಳಕ್ಕೆ ಒಂದು ಕಾರಣವಾಗಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸಿನ ವರ್ಷದಲ್ಲಿ ಬ್ಯಾಂಕ್ನ ತೆರಿಗೆ ನಂತರದ ಲಾಭವು ಶೇ 6.2ರಷ್ಟು ಹೆಚ್ಚಾಗಿ ₹50,147 ಕೋಟಿಗೆ ತಲುಪಿದೆ.

ಬ್ಯಾಂಕ್ನ ಕಾರ್ಯಾಚರಣೆ ವೆಚ್ಚವು ಶೇ 12ರಷ್ಟು ಹೆಚ್ಚಾಗಿ ₹12,089 ಕೋಟಿಗೆ ತಲುಪಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ಎನ್ಪಿಎ ಪ್ರಮಾಣವು ಶೇ 1.40ಕ್ಕೆ ಇಳಿಕೆ ಕಂಡಿದೆ. ಇದು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 1.53ರಷ್ಟು ಹಾಗೂ ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಶೇ 1.67ರಷ್ಟು ಇತ್ತು.

ದೇಶದ ಕಾರ್ಪೊರೇಟ್ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ ನೀಡಿರುವ ಸಾಲದ ಪ್ರಮಾಣವು ಶೇ 9ರಷ್ಟು ಹೆಚ್ಚಾಗಿದೆ.

ಬ್ಯಾಂಕ್ನ ಆಡಳಿತ ಮಂಡಳಿಯು ಷೇರುದಾರರಿಗೆ ₹12 ಅಂತಿಮ ಲಾಭಾಂಶ ಘೋಷಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-1513737309

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.