ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಐಸಿಐ ಬ್ಯಾಂಕ್‌ ಲಾಭ ₹4,882 ಕೋಟಿ

Last Updated 31 ಅಕ್ಟೋಬರ್ 2020, 14:35 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಜುಲೈ– ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಟ್ಟಾರೆ ₹4,882 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 1,131 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ 4 ಪಟ್ಟು ಏರಿಕೆ ಕಂಡುಬಂದಿದೆ.

ತೆರಿಗೆ ಪಾವತಿಸಿದ ನಂತರದ ಲಾಭ ₹ 4,251 ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 655 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಬ್ಯಾಂಕ್‌ ಇತಿಹಾಸದಲ್ಲಿಯೇ ತ್ರೈಮಾಸಿಕವೊಂದರಲ್ಲಿ ಗರಿಷ್ಠ ಮಟ್ಟದ ಬೆಳವಣಿಗೆ ಇದಾಗಿದೆ.

ನಿವ್ವಳ ತೆರಿಗೆ ವರಮಾನ ಶೇ 16ರಷ್ಟು ಹೆಚ್ಚಾಗಿದ್ದು, ₹ 9,366 ಕೊಟಿಗೆ ತಲುಪಿದೆ ಎಂದು ಷೇರುಪೆಟೆಗೆ ಮಾಹಿತಿ ನೀಡಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಎದುರಿಸಲು ತೆಗೆದಿರಿಸುವ ಮೊತ್ತವು ₹ 2,506 ಕೋಟಿಗಳಿಂದ ₹ 2,995 ಕೋಟಿಗಳಿಗೆ ಏರಿಕೆಯಾಗಿದೆ.

ರಿಟೇಲ್‌ ಸಾಲ ನೀಡಿಕೆ ಶೇ 6ರಷ್ಟು ಹಾಗೂ ಕಾರ್ಪೊರೇಟ್‌ ಮುಂಗಡ ಶೇ 7ರಷ್ಟು ಬೆಳವಣಿಗೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT