ಚಂದಾ ರಾಜೀನಾಮೆ: ಐಸಿಐಸಿಐ ಬ್ಯಾಂಕಿನ ಷೇರು ಬೆಲೆ ಏರಿಕೆ

7

ಚಂದಾ ರಾಜೀನಾಮೆ: ಐಸಿಐಸಿಐ ಬ್ಯಾಂಕಿನ ಷೇರು ಬೆಲೆ ಏರಿಕೆ

Published:
Updated:

ಮುಂಬೈ: ಐಸಿಐಸಿಐ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ) ಹುದ್ದೆಗೆ ಚಂದಾ ಕೊಚ್ಚಾರ್‌ ಗುರುವಾರ ರಾಜೀನಾಮೆ ನೀಡಿದ ಬಳಿಕ ಬ್ಯಾಂಕಿನ ಷೇರುಗಳ ಬೆಲೆ ದಿಢೀರನೆ ಶೇ 6ರಷ್ಟು ಏರಿಕೆಯಾಗಿದೆ.

 ಕೊಚ್ಚಾರ್‌ ಅವರ ರಾಜೀನಾಮೆ ಸ್ವೀಕಾರದ ಬೆನ್ನಲ್ಲೇ, ಷೇರು ಬೆಲೆ ಶೇ 5.69ರಷ್ಟು ಏರಿಕೆಯಾಗಿ ₹ 320.90ಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ಯಲ್ಲಿಯೂ ಷೇರಿನ ಬೆಲೆ ಶೇ 5.77ರಷ್ಟು ಏರಿಕೆ ಕಂಡು ₹ 321.25ಕ್ಕೆ ತಲುಪಿತು. ಮಧ್ಯಾಹ್ನ ನಂತರದ ವಹಿವಾಟಿನಲ್ಲಿ ಪ್ರಮುಖ ಷೇರುಗಳ ಪೈಕಿ ಗರಿಷ್ಠ ಏರಿಕೆ ಕಂಡಿತು.

 ಹುದ್ದೆಯಿಂದ ಆದಷ್ಟು ಬೇಗ ತಮ್ಮನ್ನು ಬಿಡುಗಡೆ ಮಾಡಬೇಕೆಂಬ ಚಂದಾ ಕೊಚ್ಚಾರ್‌ ಮಾಡಿದ್ದ ಮನವಿಗೆ ಸ್ಪಂದಿಸಿದ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಸಿಇಓ ಹುದ್ದೆಯಿಂದ ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ಐಸಿಐಸಿಐ ಸಿಇಓ ಹುದ್ದೆಗೆ ಚಂದಾ ಕೊಚ್ಚಾರ್‌ ರಾಜೀನಾಮೆ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !