ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಡಿಬಿಐ ಬ್ಯಾಂಕ್‌ ಹೆಸರು ಬದಲಾವಣೆಕೇಂದ್ರೀಯ ಬ್ಯಾಂಕ್‌ನ ಸಹಮತ ಇಲ್ಲ

Last Updated 17 ಮಾರ್ಚ್ 2019, 16:44 IST
ಅಕ್ಷರ ಗಾತ್ರ

ನವದೆಹಲಿ: ಐಡಿಬಿಐ ಬ್ಯಾಂಕ್‌ನ ಹೆಸರು ಬದಲಿಸಲು ಆರ್‌ಬಿಐ ಸಹಮತ ಇಲ್ಲ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ), ನಷ್ಟದಲ್ಲಿರುವ ಐಡಿಬಿಐ ಬ್ಯಾಂಕ್‌ನ ಶೇ 51ರಷ್ಟು ಷೇರುಗಳನ್ನು ಖರೀದಿಸಿದೆ. ಹೀಗಾಗಿ ಬ್ಯಾಂಕ್‌ ಹೆಸರನ್ನು ಎಲ್‌ಐಸಿ ಐಡಿಬಿಐ ಬ್ಯಾಂಕ್‌ ಅಥವಾ ಎಲ್‌ಐಸಿ ಬ್ಯಾಂಕ್‌ ಎಂದು ಬದಲಿಸುವಂತೆ ಬ್ಯಾಂಕ್‌ನ ಆಡಳಿತ ಮಂಡಳಿಯು ಆರ್‌ಬಿಐಗೆ ಪ್ರಸ್ತಾವನೆ ಸಲ್ಲಿಸಿತ್ತು.

ಆದರೆ, ಆರ್‌ಬಿಐ ಈ ಪ್ರಸ್ತಾವನೆಯ ಪರವಾಗಿ ಇಲ್ಲ. ಹೆಸರು ಬದಲಾವಣೆಗೆ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ, ಪಾಲುದಾರರು, ಷೇರು ವಿನಿಮಯ ಕೇಂದ್ರಗಳೂ ಒಪ್ಪಿಗೆ ನೀಡಬೇಕಾಗಿದೆ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT