ಗುರುವಾರ , ಆಗಸ್ಟ್ 18, 2022
27 °C

ಟಾಟಾ ಸಂಸ್ಥೆಗೆ ಮಾತ್ರ ಏರ್ ಇಂಡಿಯಾ ನಿರ್ವಹಣೆ ಸಾಧ್ಯ: ಎಮಿರೇಟ್ಸ್ ಅಧ್ಯಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದೋಹಾ: ಭಾರತದಲ್ಲಿ ವಿಮಾನ ಸಂಸ್ಥೆ ಸಂಸ್ಥೆ ನಿರ್ವಹಿಸುವುದು ಸುಲಭದ ವಿಚಾರವಲ್ಲ ಎಂದು ಪ್ರತಿಪಾದಿಸಿರುವ ಎಮಿರೇಟ್ಸ್ ಅಧ್ಯಕ್ಷ ಟಿಮ್ ಕ್ಲಾರ್ಕ್ ಅವರು, ಏರ್ ಇಂಡಿಯಾವನ್ನು ಟಾಟಾ ಸಂಸ್ಥೆ ನಿರ್ವಹಿಸಲಾಗದಿದ್ದರೆ, ಬೇರೆ ಯಾರಿಂದಲೂ ಈ ಸಂಸ್ಥೆಯನ್ನು ನಿರ್ವಹಿಸಲಾಗದು ಎಂದು ಹೇಳಿದ್ದಾರೆ. 

ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ 78ನೇ ವಾರ್ಷಿಕ ಸಾಮಾನ್ಯ ಸಭೆಯ ಭಾಗವಾಗಿ ಸೋಮವಾರ ಮಾತನಾಡಿದ ಕ್ಲಾರ್ಕ್ ಅವರು, ‘ದೇಶೀಯ ಮಾರುಕಟ್ಟೆ, ಭಾರತಕ್ಕೆ ಒಳಹರಿವು ಮತ್ತು ಹೊರ ಹರಿವಿನ ಆರ್ಥಿಕ ಚಟುವಟಿಕೆಗಳ ಕಾರಣದಿಂದಾಗಿ ಏರ್ ಇಂಡಿಯಾ ಬೃಹತ್ ಸಂಸ್ಥೆಯಾಗಿದೆ. ಇದೊಂದು ಚಿನ್ನದ ಗಣಿ’ ಎಂದು ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು