ಐಎಲ್‌ಆ್ಯಂಡ್‌ಎಫ್‌ಎಸ್‌ ಅಂಗಸಂಸ್ಥೆಗಳಿಗೆಹೊಸ ನಿರ್ದೇಶಕರ ನೇಮಕ

7

ಐಎಲ್‌ಆ್ಯಂಡ್‌ಎಫ್‌ಎಸ್‌ ಅಂಗಸಂಸ್ಥೆಗಳಿಗೆಹೊಸ ನಿರ್ದೇಶಕರ ನೇಮಕ

Published:
Updated:

ಮುಂಬೈ: ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವೀಸಸ್‌ನ (ಐಎಲ್‌ ಆ್ಯಂಡ್‌ಎಫ್‌ಎಸ್‌) ಹೊಸ ಆಡಳಿತ ಮಂಡಳಿಯು 8 ಅಂಗಸಂಸ್ಥೆಗಳಿಗೆ  ನಿರ್ದೇಶಕರನ್ನು ನೇಮಕ ಮಾಡಿದೆ.

ಉದಯ್‌ ಕೋಟಕ್‌ ನೇತೃತ್ವದ ಆರು ಸದಸ್ಯರ ಮಂಡಳಿಯು ಶುಕ್ರವಾರ ಈ ನೇಮಕ ಮಾಡಿದೆ. ಸಿಬ್ಬಂದಿ ಮತ್ತು ಕಾರ್ಯಾಚರಣೆ ವೆಚ್ಚ ನಿಯಂತ್ರಣಕ್ಕೆ ಸಂಬಂಧಿಸಿದಂತೆಯೂ ಕೆಲವು ಕ್ರಮಗಳನ್ನು ಪ್ರಕಟಿಸಿದೆ.

ಸೆಬಿಯ ಮಾಜಿ ಅಧ್ಯಕ್ಷ ಜಿ.ಎನ್‌. ಬಾಜ್‌ಪೈ, ಐಸಿಐಸಿಐ ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಜಿ.ಸಿ. ಚತುರ್ವೇದಿ, ಐಎಎಸ್‌ ಅಧಿಕಾರಿ ಮಾಲಿನಿ ಶಂಕರ್‌,  ಬಂದರು ಇಲಾಖೆಯ ಮಹಾನಿರ್ದೇಶಕ ವಿನೀತ್‌ ನಾಯರ್‌, ಲೆಕ್ಕಪರಿಶೋಧಕ ನಂದಕಿಶೋರ್‌ ಮತ್ತು ರಾಜಸ್ಥಾನದ ಮಾಜಿ ಮುಖ್ಯ ಕಾರ್ಯದರ್ಶಿ ಸಿ.ಎಸ್‌. ರಾಜನ್‌ ಅವರು ಅಂಗಸಂಸ್ಥೆಗಳ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ಕೇಂದ್ರ ಸರ್ಕಾರ ಅಕ್ಟೋಬರ್‌ 1 ರಂದು ಐಎಲ್‌ಎಫ್‌ಎಸ್‌ ಆಡಳಿತ ಮಂಡಳಿಯನ್ನು ವಜಾಗೊಳಿಸಿ, ಹೊಸ ಮಂಡಳಿಯನ್ನು ರಚನೆ ಮಾಡಿತ್ತು.

ಐಎಲ್‌ಆ್ಯಂಡ್‌ಎಫ್‌ಎಸ್‌ ಸಾಲದ ಹೊರೆ ₹ 91 ಸಾವಿರ ಕೋಟಿ ಇದೆ. ತಕ್ಷಣಕ್ಕೆ ₹ 3 ಸಾವಿರ ಕೋಟಿ ಬಂಡವಾಳದ ಅಗತ್ಯವಿದ್ದುಯ,
₹ 4,500 ಕೋಟಿ ಸಂಗ್ರಹಿಸುವ ನಿರೀಕ್ಷೆ ಹೊಂದಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !