ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ನಕಾರಾತ್ಮಕ ಬೆಳವಣಿಗೆ: ಐಎಂಎಫ್‌

Last Updated 24 ಜೂನ್ 2020, 16:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್‌ ಬಿಕ್ಕಟ್ಟಿನಿಂದಾಗಿ ಭಾರತದ ಆರ್ಥಿಕತೆಯು 2020ರಲ್ಲಿ ಶೇ 4.5ರಷ್ಟು ಕುಸಿತ ಕಾಣಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಹೇಳಿದೆ.

2020ರಲ್ಲಿನ ಬೆಳವಣಿಗೆಯು 1961ರ ನಂತರದ ಕನಿಷ್ಠ ಮಟ್ಟದ್ದಾಗಲಿದೆ.2021ರಲ್ಲಿ ಚೇತರಿಕೆ ಹಾದಿಗೆ ಮರಳಲಿದ್ದು, ಶೇ 6 ದರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದೂ ಹೇಳಿದೆ.

‘ಲಾಕ್‌ಡೌನ್‌ ಆರ್ಥಿಕ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ಬಹುತೇಕ ಎಲ್ಲಾ ದೇಶಗಳ ಆರ್ಥಿಕತೆಯೂ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿಯುವ ಅಂದಾಜು ಮಾಡಲಾಗಿದೆ’ ಎಂದು ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

‘ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇಶೇ 75ರಷ್ಟು ದೇಶಗಳು ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸುತ್ತಿವೆ. ಕೆಲವು ದೇಶಗಳು ಚೇತರಿಕೆ ಕಂಡುಕೊಳ್ಳುತ್ತಿವೆ. ಆದರೆ, ವೈದ್ಯಕೀಯ ಪರಿಹಾರ ಇಲ್ಲದೇ ಇರುವುದರಿಂದ ಚೇತರಿಕೆಯು ಅನಿಶ್ಚಿತವಾಗಿದ್ದು, ವಲಯಗಳು ಮತ್ತು ದೇಶಗಳ ಮೇಲೆ ಬೀರಲಿರುವ ಪರಿಣಾಮಗಳ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

2020ರ ಮೊದಲಾರ್ಧದಲ್ಲಿ ಆರ್ಥಿಕ ಚಟುವಟಿಕೆಗಳ ಮೇಲೆ ಕೋವಿಡ್‌ ಪರಿಣಾಮವು ನಿರೀಕ್ಷೆಗಿಂತಲೂ ಹೆಚ್ಚಿನದ್ದಾಗಿದೆ. ಚೇತರಿಕೆಯು ಈ ಹಿಂದೆ ಅಂದಾಜು ಮಾಡಿರುವುದಕ್ಕಿಂತಲೂ ನಿಧಾನವಾಗಿರಲಿದೆ. 2020ರಲ್ಲಿ ಜಾಗತಿಕ ಆರ್ಥಿಕ ಪ್ರಗತಿ ಶೇ 4.9ರಷ್ಟು ಕುಸಿಯಲಿದೆ. 2021ರಲ್ಲಿ ಶೇ 5.4ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT