ಮಂಗಳವಾರ, ಜನವರಿ 19, 2021
25 °C

ಬಲಾಢ್ಯ ದೇಶಗಳಿಗಿಂತ ತ್ವರಿತವಾಗಿ ಚೇತರಿಸಿಕೊಳ್ಳುತ್ತಿದೆ ಚೀನಾ ಆರ್ಥಿಕತೆ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಜಗತ್ತಿನ ಇತರ ಬಲಾಢ್ಯ ದೇಶಗಳಿಗೆ ಹೋಲಿಸಿದರೆ, ಚೀನಾ ಆರ್ಥಿಕತೆ ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಹೇಳಿದೆ. 2021ನೇ ವರ್ಷದಲ್ಲಿ ಚೀನಾ ಆರ್ಥಿಕ ಪ್ರಗತಿ ಶೇ 8ರಷ್ಟಿರಲಿದೆ ಎಂದು ಐಎಂಎಫ್‌ ಅಂದಾಜಿಸಿದೆ.

ಆರ್ಥಿಕ ಚೇತರಿಕೆಯಲ್ಲಿ ಸಮತೋಲನ ಕಂಡು ಬರುತ್ತಿಲ್ಲ. ಮುಂಬರುವ ದಿನಗಳಲ್ಲಿ ಮತ್ತೆ ಕುಸಿಯುವ ಅಪಾಯವನ್ನು ಸಹ ಚೀನಾ ಆರ್ಥಿಕತೆ ಎದುರಿಸುತ್ತಿದೆ ಎಂದು ಐಎಂಎಫ್‌ನ ಏಷ್ಯಾ ಹಾಗೂ ಪೆಸಿಫಿಕ್‌ ವಿಭಾಗದ ಸಹಾಯಕ ನಿರ್ದೇಶಕ, ಚೀನಾಕ್ಕೆ ಸಂಬಂಧಿಸಿದ ವ್ಯವಹಾರಗಳ ಮುಖ್ಯಸ್ಥ ಹೆಲ್ಗೆ ಬರ್ಗರ್‌ ಹೇಳಿದ್ದಾರೆ.

ಅಮೆರಿಕ ನಂತರ ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಚೀನಾ ಹೊರಹೊಮ್ಮಿದೆ.

ಖಾಸಗಿ ವಲಯದ ಹೂಡಿಕೆಯಿಂದ ಆರ್ಥಿಕ ಚಟುವಟಿಕೆಗೆ ಬಲ ಬಂದಿದೆ. ಆದರೆ, ಗ್ರಾಹಕರ ಖರೀದಿ ಶಕ್ತಿ ಹೆಚ್ಚುತ್ತಿಲ್ಲ ಎಂಬುದೇ ಕಳವಳಕಾರಿ ಸಂಗತಿ. ಆರ್ಥಿಕ ಸಂಕಷ್ಟಕ್ಕೂ ಮುಂಚಿನ ದಿನಗಳಿಗೆ ಹೋಲಿಸಿದರೆ ಈಗ ಬೇಡಿಕೆ ಮತ್ತು ಬಳಕೆ ಮಟ್ಟದಲ್ಲಿ ಇನ್ನೂ ಸುಧಾರಣೆ ಅಗತ್ಯ ಎಂದೂ ಬರ್ಗರ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು