ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಪೋರ್ಟಲ್‌ ಚೆನ್ನಾಗಿ ಕೆಲಸ ಮಾಡುತ್ತಿದೆ: ಇನ್ಫೊಸಿಸ್‌ ಸಿಇಒ ಸಲೀಲ್‌

Last Updated 16 ಆಗಸ್ಟ್ 2022, 1:05 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಾಯ ತೆರಿಗೆಯ ಇ–ಫೈಲಿಂಗ್‌ ಪೋರ್ಟಲ್ ಮತ್ತು ಜಿಎಸ್‌ಟಿಎನ್‌ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಸೋಮವಾರ ತಿಳಿಸಿದ್ದಾರೆ.

ಎರಡೂ ಜಾಲತಾಣಗಳನ್ನು ಇನ್ಫೊಸಿಸ್‌ ಅಭಿವೃದ್ಧಿಪಡಿಸಿದ್ದು, ತಾಂತ್ರಿಕ ಬೆಂಬಲವನ್ನೂ ನೀಡುತ್ತಿದೆ.

‘ಕಳೆದ ವರ್ಷ ಜೂನ್‌ 7ರಂದು ಐ.ಟಿ. ಪೋರ್ಟಲ್‌ ಬಳಕೆಗೆ ಲಭ್ಯವಾದಾಗ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ನಂತರ ಆಗೊಮ್ಮೆ ಈಗೊಮ್ಮೆ ಸಮಸ್ಯೆ ಕಂಡುಬಂದಿತ್ತು. ಎಲ್ಲವನ್ನೂ ಈಗ ಪರಿಹರಿಸಲಾಗಿದೆ' ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಐಟಿಆರ್ ಸಲ್ಲಿಕೆಗೆ ಜುಲೈ 31 ಕಡೆಯ ದಿನವಾಗಿತ್ತು. ರಿಟರ್ನ್ಸ್ ಸಲ್ಲಿಕೆಯು ಸುಗಮವಾಗಿ ನಡೆಯಿತು. ಆ ದಿನವೇ 70 ಲಕ್ಷ ರಿಟರ್ನ್ಸ್‌ ಸಲ್ಲಿಕೆ ಆಗಿದೆ. ತೆರಿಗೆ ಇಲಾಖೆ ಮತ್ತು ತೆರಿಗೆದಾರರ ದೃಷ್ಟಿಯಿಂದ ವ್ಯವಸ್ಥೆಯು ಪರಿಣಾಮಕಾರಿ ಆಗಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT