ಸೋಮವಾರ, ಮಾರ್ಚ್ 27, 2023
29 °C

ಗಡುವು ಮುಗಿದರೂ ಬಗೆಹರಿಯದ ಐ.ಟಿ. ಪೋರ್ಟಲ್‌ ಸಮಸ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸರ್ಕಾರವು ಇನ್ಫೊಸಿಸ್‌ ಕಂಪನಿಗೆ ನೀಡಿದ್ದ ಗಡುವು ಬುಧವಾರಕ್ಕೆ ಮುಗಿದಿದ್ದರೂ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು ತೆರಿಗೆ ತಜ್ಞರು ಹೇಳಿದ್ದಾರೆ.

ಪೋರ್ಟಲ್‌ನಲ್ಲಿ ಹಲವು ತೊಂದರೆಗಳನ್ನು ಎದುರಿಸುತ್ತಿರುವುದಾಗಿ ತೆರಿಗೆ ತಜ್ಞರು ಹೇಳಿದ್ದಾರೆ. ಸಲ್ಲಿಸಿರುವ ವಿವರಗಳನ್ನು ಸರಿಪಡಿಸಲು, ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಲು ಆಗುತ್ತಿಲ್ಲ. 2013–14ನೇ ಮೌಲ್ಯಮಾಪನ ವರ್ಷಕ್ಕಿಂತ ಮೊದಲಿನ ಐ.ಟಿ.ಆರ್‌. ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆಯು ಕಳುಹಿಸಿದ ಪ್ರಶ್ನೆಗಳಿಗೆ ಇನ್ಫೊಸಿಸ್‌ ಮತ್ತು ಆದಾಯ ತೆರಿಗೆ ಇಲಾಖೆ ಪ್ರತಿಕ್ರಿಯೆ ನೀಡಿಲ್ಲ.

‘ಒಂದು ದಿನ ಚೆನ್ನಾಗಿ ಕೆಲಸ ಮಾಡಿದರೆ ಮತ್ತೊಂದು ದಿನ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ತೆರಿಗೆ ಪಾವತಿದಾರರಿಗೆ ಐ.ಟಿ.ಆರ್‌ ಸಲ್ಲಿಸಲು ಕಷ್ಟವಾಗುತ್ತಿದೆ’ ಎಂದು ನಂಗಿಯಾ ಆ್ಯಂಡ್‌ ಕೊ ಎಲ್‌ಎಲ್‌ಪಿ ಪಾಲುದಾರ ಶೈಲೇಶ್‌ ಕುಮಾರ್‌ ತಿಳಿಸಿದ್ದಾರೆ.

ಪೋರ್ಟಲ್‌ನಲ್ಲಿ ಈಗ ಕೆಲವೊಂದಿಷ್ಟು ಸುಧಾರಣೆ ಆಗಿದೆಯಾದರೂ ಹಲವು ಸಮಸ್ಯೆಗಳು ಉಳಿದುಕೊಂಡಿವೆ ಎಂದು ತೆರಿಗೆ ಮತ್ತು ಸಲಹಾ ಸಂಸ್ಥೆ ಎಕೆಎಂ ಗ್ಲೋಬಲ್‌ನ ನಿರ್ದೇಶಕ ಸಂದೀಪ್‌ ಸೆಹಗಲ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು