ಸೋಮವಾರ, ಆಗಸ್ಟ್ 2, 2021
28 °C

2018-2019ರ ಅವಧಿಯಲ್ಲಿ ದೇಶದ ನಿರುದ್ಯೋಗ ದರ ಶೇ.5.8 ಇಳಿಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

unemployment

ನವದೆಹಲಿ: ಹಿಂದಿನ ವರ್ಷಕ್ಕೆ ಹೋಲಿಸಿದರೆ ಜೂನ್ 2018- ಜೂನ್ 2019ರ ಅವಧಿಯಲ್ಲಿ ಭಾರತದ ನಿರುದ್ಯೋಗ ದರವು ಶೇ. 6.1ರಿಂದ ಶೇ.5.8ಕ್ಕೆ ಇಳಿದಿದೆ ಎಂದು ಸರ್ಕಾರ ಹೇಳಿದೆ.

ನಿರುದ್ಯೋಗಿಗಳ ವಯಸ್ಸು 15-29 ಆಗಿದ್ದು, ಇದು ಭಾರತದ 136 ಕೋಟಿ ಜನಸಂಖ್ಯೆಯ ಮೂರನೇ ಒಂದರಷ್ಟು ಆಗಿದೆ. 2017ರಲ್ಲಿ ನಿರುದ್ಯೋಗ ದರ ಶೇ. 17.8 ಆಗಿದ್ದು 2018-19ರ ಅವಧಿಯಲ್ಲಿ ಶೇ.17.3ಕ್ಕೆಇಳಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿದೆ. 

ಕಳೆದ ಬಾರಿ ಲೋಕಸಭಾ ಚುನಾವಣೆ ಹೊತ್ತಲ್ಲಿ ಜುಲೈ 2017 - ಜೂನ್ 2018ರ ವಾರ್ಷಿಕ ವರದಿ ಸೋರಿಕೆ ಮಾಡಿ ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆ ವರದಿ ಪ್ರಕಟಿಸಿತ್ತು.  ಭಾರತದಲ್ಲಿ ನಿರುದ್ಯೋಗ ದರ ಏರಿಕೆಯಾಗಿದ್ದು, ಕಳೆದ 45 ವರ್ಷಗಳ ಪೈಕಿ ಇದೇ ಅತೀ ಹೆಚ್ಚು ಏರಿಕೆ ಕಂಡಿರುವುದು ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆನಂತರ ಮೋದಿ ಸರ್ಕಾರ ಅಧಿಕೃತವಾಗಿ ವರದಿ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಲಾಕ್‌ಡೌನ್‌ ಪರಿಣಾಮ: ಭಾರತದಲ್ಲಿ 6 ಕೋಟಿ ಜನ ಕೆಲಸ ಕಳೆದುಕೊಳ್ಳುವ ಸಾಧ್ಯತೆ?

ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯು (ಎನ್‌ಎಸ್‌ಒ) ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ 1,00,000 ಕ್ಕಿಂತಲೂ ಹೆಚ್ಚು ಕುಟುಂಬಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಮಿಕರ ಸಮೀಕ್ಷೆ ನಡೆಸಿದ್ದು, ಇದರ ಮಾಹಿತಿ ಆಧರಿಸಿ ವಾರ್ಷಿಕ ವರದಿ ಸಿದ್ಧಪಡಿಸಲಾಗಿದೆ.

ಕೊರೊನಾವೈರಸ್ ಪಿಡುಗು ನಿಯಂತ್ರಣಕ್ಕಾಗಿ ಮಾರ್ಚ್ ಕೊನೆಯ ವಾರದಲ್ಲಿ ಲಾಕ್‌ಡೌನ್ ಘೋಷಿಸಿದ್ದರಿಂದ ಭಾರತದ ನಿರುದ್ಯೋಗ ದರ ಏರಿಕೆಯಾಗಿದೆ ಎಂದು  ಖಾಸಗಿ ಆರ್ಥಿಕ ತಜ್ಞರು ಮತ್ತು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ನಿರುದ್ಯೋಗ ದರ ಮೇ ತಿಂಗಳಲ್ಲಿ ಶೇ.23.48ಕ್ಕೇರಿದೆ. ಏಪ್ರಿಲ್ ತಿಂಗಳಲ್ಲಿ ಶೇ 23.52 ಆಗಿತ್ತು ಎಂದು  ಭಾರತೀಯ ಆರ್ಥಿಕ ನಿಗಾ ಸಂಸ್ಥೆ (ಸಿಎಂಐಇ) ವರದಿಯಲ್ಲಿ ಹೇಳಿದೆ.

ಭಾರತದಲ್ಲಿ 2,17,000 ದಷ್ಟು  ಕೊರೊನಾವೈರಸ್ ಪ್ರಕರಣಗಳು ಇದ್ದು 6,075 ಮಂದಿ ಸಾವಿಗೀಡಾಗಿದ್ದಾರೆ. 2019-2020ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ 3.1ಕ್ಕೆ ಇಳಿದಿದ್ದು, ಹೆಚ್ಚು ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು