ಭಾನುವಾರ, ಏಪ್ರಿಲ್ 18, 2021
24 °C

ದೇಶದ ಸಿರಿವಂತರ ಪಟ್ಟಿಗೆ 40 ಹೊಸಬರ ಸೇರ್ಪಡೆ: ಅಂಬಾನಿ-ಅದಾನಿ ಸಂಪತ್ತು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: 2020ರಲ್ಲಿ ದೇಶದ ಸಿರಿವಂತರ ಪಟ್ಟಿಗೆ 40 ಮಂದಿ ಹೊಸಬರು ಸೇರ್ಪಡೆಯಾಗಿದ್ದಾರೆ. ಇದರಿಂದ ಒಟ್ಟಾರೆ ಸಿರಿವಂತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.

ಹುರುನ್‌ ಇಂಡಿಯಾ ಕಂಪನಿಯು ಬಿಡುಗಡೆ ಮಾಡಿರುವ 2020ರ ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಮೊದಲ ಸ್ಥಾನದಲ್ಲಿದ್ದಾರೆ. ಜಾಗತಿಕವಾಗಿ ಅವರು ಎಂಟನೇ ಸ್ಥಾನ ಪಡೆದಿದ್ದಾರೆ. ಅವರ ಸಂಪತ್ತು ಶೇ 24ರಷ್ಟು ಹೆಚ್ಚಾಗಿದ್ದು, ಒಟ್ಟಾರೆ ಸಂಪತ್ತು ಮೌಲ್ಯ ₹ 6.05 ಲಕ್ಷ ಕೋಟಿಗಳಷ್ಟಿದೆ.

ಗೌತಮ್‌ ಅದಾನಿ ಅವರ ಸಂಪತ್ತು ಎರಡುಪಟ್ಟು ಹೆಚ್ಚಾಗಿದ್ದು, ₹ 2.33 ಲಕ್ಷ ಕೋಟಿಗಳಿಗೆ ತಲುಪಿದೆ. ದೇಶದ ಸಿರಿವಂತ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಜಾಗತಿಕವಾಗಿ 48ನೇ ಸ್ಥಾನ ಪಡೆದುಕೊಂಡಿದ್ದಾರೆ.

ಎಚ್‌ಸಿಎಲ್‌ ಕಂಪನಿಯ ಶಿವ ನಾಡಾರ್‌ ಅವರು ದೇಶದ ಮೂರನೇ ಸಿರಿವಂತ ವ್ಯಕ್ತಿ ಆಗಿದ್ದಾರೆ.

ಪತಂಜಲಿ ಆಯುರ್ವೇದ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಅವರ ಸಂಪತ್ತನಲ್ಲಿ ಶೇ 32ರಷ್ಟು ಇಳಿಕೆ ಆಗಿದೆ.

ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಬಯೊಕಾನ್‌ ಮುಖ್ಯಸ್ಥೆ ಕಿರಣ್‌ ಮಜುಮ್ದಾರ್‌ ಶಾ ಅವರು ಮೊದಲ ಸ್ಥಾನದಲ್ಲಿದ್ದಾರೆ. ಗೊದ್ರೇಜನ್‌ ಸ್ಮಿತಾ ವಿ. ಕೃಷ್ಣ ಅವರು ಎರಡನೇ ಹಾಗೂ ಲುಪಿನ್‌ ಕಂಪನಿಯ ಮಂಜು ಗುಪ್ತಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಟೆಸ್ಲಾ ಕಂಪನಿಯ ಎಲನ್‌ ಮಸ್ಕ್‌ ಅವರು ಮೊದಲ ಸ್ಥಾನದಲಿದ್ದು, ಅಮೆಜಾನ್‌ನ ಜೆಫ್‌ ಬೆಜೋಸ್ ಎರಡನೇ ಸ್ಥಾನದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು