ನವದೆಹಲಿ (ಪಿಟಿಐ): ₹50 ಲಕ್ಷಕ್ಕಿಂತ ಕಡಿಮೆ ಬೆಲೆಯ ‘ಕೈಗೆಟಕುವ ದರ’ದ ಮನೆಗಳ ಮಾರಾಟವು ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಎಂಟು ಪ್ರಮುಖ ನಗರಗಳಲ್ಲಿ ಶೇಕಡ 23ರಷ್ಟು ಇಳಿಕೆ ಕಂಡಿದೆ ಎಂದು ರಿಯಲ್ ಎಸ್ಟೇಟ್ ಆಸ್ತಿ ಸಲಹಾ ಸಂಸ್ಥೆ ನೈಟ್ ಫ್ರ್ಯಾಂಕ್ ಸಂಸ್ಥೆ ಸಿದ್ಧಪಡಿಸಿರುವ ವರದಿ ಹೇಳಿದೆ.

ಈ ವರ್ಗದ ಹೊಸ ಮನೆಗಳ ಲಭ್ಯತೆಯು ಕಡಿಮೆ ಆಗಿದ್ದುದು ಮಾರಾಟ ಕಡಿಮೆ ಆಗಲು ಒಂದು ಪ್ರಮುಖ ಕಾರಣ ಎಂದು ವರದಿಯು ಹೇಳಿದೆ. ಕೋವಿಡ್ ಸಾಂಕ್ರಾಮಿಕದ ನಂತರದಲ್ಲಿ ಐಷಾರಾಮಿ ವರ್ಗದ ಮನೆಗಳಿಗೆ ಬೇಡಿಕೆ ಹೆಚ್ಚಾಗಿದೆ.

‘ಕೈಗೆಟಕುವ ದರ’ದ ಮನೆಗಳ ನಿರ್ಮಾಣ ಕೂಡ ಕಡಿಮೆ ಆಗುತ್ತಿದೆ, ಜಮೀನಿನ ಬೆಲೆ ಹೆಚ್ಚಳ ಹಾಗೂ ನಿರ್ಮಾಣದಲ್ಲಿ ಬಳಕೆಯಾಗುವ ಉತ್ಪನ್ನಗಳ ಬೆಲೆ ಹೆಚ್ಚಳ ಇದಕ್ಕೆ ಕಾರಣ ಎಂದು ಬಿಲ್ಡರ್ಗಳು ಹೇಳಿದ್ದಾರೆ.

ಕೈಗೆಟಕುವ ದರದ ಮನೆಗಳ ಮಾರಾಟ ಪ್ರಮಾಣವು ಎಂಟೂ ನಗರಗಳಲ್ಲಿ ಇಳಿಕೆ ಕಂಡಿದೆ ಎಂದು ನೈಟ್ ಫ್ರ್ಯಾಂಕ್ ತಿಳಿಸಿದೆ. ಇಷ್ಟೇ ಅಲ್ಲ, ₹50 ಲಕ್ಷದಿಂದ ₹1 ಕೋಟಿವರೆಗಿನ ದರದ ಮನೆಗಳ ಮಾರಾಟ ಕೂಡ ಇಳಿಕೆ ಆಗಿದೆ. ಕಳೆದ ವರ್ಷದ ಮಾರ್ಚ್ ತ್ರೈಮಾಸಿಕ ಹಾಗೂ ಈ ವರ್ಷದ ಮಾರ್ಚ್ ತ್ರೈಮಾಸಿಕದ ಮಾರಾಟ ಸಂಖ್ಯೆ ಹೋಲಿಸಿದರೆ, ಈ ಬಾರಿ ಮಾರಾಟ ಪ್ರಮಾಣ ಶೇ 12ರಷ್ಟು ತಗ್ಗಿದೆ.

ಮುಂಬೈ, ದೆಹಲಿ–ಎನ್ಸಿಆರ್ ಪ್ರದೇಶ, ಪುಣೆ, ಬೆಂಗಳೂರು, ಹೈದರಾ ಬಾದ್, ಚೆನ್ನೈ, ಅಹಮದಾಬಾದ್ ಮತ್ತು ಕೋಲ್ಕತ್ತ ನಗರಗಳಲ್ಲಿನ ಮನೆಗಳ ಮಾರಾಟ ಸಂಖ್ಯೆಯನ್ನು ಸಂಸ್ಥೆಯು ಅಧ್ಯಯನಕ್ಕೆ ಪರಿಗಣಿಸಿದೆ.

₹1 ಕೋಟಿಯಿಂದ ₹2 ಕೋಟಿವ ರೆಗಿನ ಬೆಲೆಯ ಮನೆಗಳ ಮಾರಾಟವು ಮಾರ್ಚ್ ತ್ರೈಮಾಸಿಕದಲ್ಲಿ ಶೇ 10ರಷ್ಟು ಹೆಚ್ಚಾಗಿದೆ. ₹2 ಕೋಟಿಯಿಂದ ₹5 ಕೋಟಿವರೆಗಿನ ಬೆಲೆಯ ಮನೆಗಳ ಮಾರಾಟವು ಶೇ 17ರಷ್ಟು ಜಾಸ್ತಿ ಆಗಿದೆ. ₹5 ಕೋಟಿಯಿಂದ ₹10 ಕೋಟಿವರೆಗಿನ ಬೆಲೆಯ ಮನೆಗಳ ಮಾರಾಟದಲ್ಲಿ ಶೇ 3ರಷ್ಟು ಇಳಿಕೆ ಕಂಡುಬಂದಿದೆ.

ಎಲ್ಲ ಬೆಲೆ ವರ್ಗಗಳ ಮನೆಗಳ ಮಾರಾಟವನ್ನು ಪರಿಗಣಿಸಿದರೆ, ಮಾರಾಟದ ಪ್ರಮಾಣವು ಮಾರ್ಚ್ ತ್ರೈಮಾಸಿಕದಲ್ಲಿ ಶೇ 4ರಷ್ಟು ಇಳಿಕೆ ಕಂಡಿದೆ. ಬೇಡಿಕೆ ಕಡಿಮೆ ಇದ್ದುದು, ಬೆಲೆ ಹೆಚ್ಚಳ ಹಾಗೂ ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ಉಂಟಾದ ಅನಿಶ್ಚಿತತೆಯು ಮಾರಾಟ ಇಳಿಕೆಗೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.