ನವದೆಹಲಿ: ನೆಸ್ಲೆ ಕಂಪನಿ ತಯಾರಿಸುವ ‘ಕಿಟ್ಕ್ಯಾಟ್’ ಚಾಕಲೇಟ್ ಪಾಲಿಗೆ ಭಾರತವು ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆದಿದೆ.

ಗ್ರಾಹಕರಿಗೆ ಇದು ಇಷ್ಟವಾಗಿರು ವುದು, ಈ ಉತ್ಪನ್ನದ ಮಾರಾಟಕ್ಕಾಗಿ ಬಹ ಳಷ್ಟು ಹೂಡಿಕೆ ಮಾಡಿರುವುದು ಇದನ್ನು ಸಾಧ್ಯವಾಗಿಸಿದೆ ಎಂದು ಕಂಪನಿ ಹೇಳಿದೆ.

ಕಿಟ್ಕ್ಯಾಟ್ ಚಾಕಲೇಟ್ ಪಾಲಿಗೆಭಾರತವು ಕಳೆದ ಎರಡು–ಮೂರು ವರ್ಷಗಳಿಂದ ಎರಡನೆಯ ಅತಿದೊಡ್ಡ ಮಾರುಕಟ್ಟೆಯಾಗಿತ್ತು. ಈಗ ಅದು ಮೊದಲ ಸ್ಥಾನಕ್ಕೆ ಬಂದಿದೆ. ಈ ಚಾಕಲೇಟ್ ಅನ್ನು ಕಂಪನಿಯು 85ಕ್ಕೂಹೆಚ್ಚಿನ ದೇಶಗಳಲ್ಲಿ ಮಾರಾಟ ಮಾಡುತ್ತಿದೆ.

‘ಕಿಟ್ಕ್ಯಾಟ್ ಬ್ರ್ಯಾಂಡ್ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿ ಕೊಳ್ಳುವುದು ಕಳೆದ ಕೆಲವು ವರ್ಷಗಳಲ್ಲಿ ಇನ್ನಷ್ಟು ವೇಗ ಪಡೆದುಕೊಂಡಿದೆ’ ಎಂದು ನೆಸ್ಲೆ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೀಶ್ ತಿವಾರಿ ಹೇಳಿದ್ದಾರೆ.

ನೆಸ್ಲೆ ಕಂಪನಿಯ ಮ್ಯಾಗಿ ಉತ್ಪನ್ನದ ಪಾಲಿಗೆ ಕೂಡ ಭಾರತವು ಅತಿದೊಡ್ಡ ಮಾರುಕಟ್ಟೆಯಾಗಿದೆ. ಒಂದು ದಶಕದ ಹಿಂದೆ ಕಿಟ್ಕ್ಯಾಟ್ ಪಾಲಿಗೆ ಭಾರತವು ಹತ್ತನೆಯ ಅತಿದೊಡ್ಡ ಮಾರುಕಟ್ಟೆ ಆಗಿತ್ತು.

ಜಪಾನ್, ಬ್ರೆಜಿಲ್ ಮತ್ತು ಯುರೋಪಿನಲ್ಲಿಯೂ ಕಿಟ್ಕ್ಯಾಟ್ಗೆ ದೊಡ್ಡ ಮಾರುಕಟ್ಟೆ ಇದೆ. ಬ್ರಿಟಷ್ ಕಂಪನಿಯಾದ ರೌನ್ಟ್ರೀಸ್ 1930ರ ದಶಕದಲ್ಲಿ ಕಿಟ್ಕ್ಯಾಟ್ ತಯಾರಿಸಿತು. 1988ರಲ್ಲಿ ನೆಸ್ಲೆ ಕಂಪನಿಯು ಈ ಕಂಪನಿಯನ್ನು ಖರೀದಿಸುವ ಮೂಲಕ ಕಿಟ್ಕ್ಯಾಟ್ ಬ್ರ್ಯಾಂಡ್ಅನ್ನು ತನ್ನದಾಗಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.