ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಿಂದ 20 ಲಕ್ಷ ಬ್ಯಾರೆಲ್ ತೈಲ ಖರೀದಿಸಿದ ಬಿಪಿಸಿಎಲ್

Last Updated 6 ಏಪ್ರಿಲ್ 2022, 16:58 IST
ಅಕ್ಷರ ಗಾತ್ರ

ನವದೆಹಲಿ (ರಾಯಿಟರ್ಸ್): ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಬಿಪಿಸಿಎಲ್) 20 ಲಕ್ಷ ಯೂರಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದೆ. ಇದು ಮೇ ತಿಂಗಳಲ್ಲಿ ಸಾಗಣೆ ಆಗಲಿದೆ ಎಂದು ಮೂಲಗಳು ಹೇಳಿವೆ.

ರಷ್ಯಾ ಸೇನೆಯು ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರದಲ್ಲಿ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುತ್ತಿವೆ. ಪಶ್ಚಿಮದ ಹಲವು ದೇಶಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿವೆ.

ಬಿಪಿಸಿಎಲ್‌ ಕಂಪನಿಯು ರಷ್ಯಾದ ಯೂರಲ್ಸ್ ಕಚ್ಚಾ ತೈಲದ ಕಾಯಂ ಗ್ರಾಹಕ. ಈಗಿನ ಖರೀದಿಯನ್ನೂ ಪರಿಗಣಿಸಿದರೆ, ಭಾರತವು ಫೆಬ್ರುವರಿ 24ರ ನಂತರ ರಷ್ಯಾದಿಂದ ಒಟ್ಟು 1.60 ಕೋಟಿ ಬ್ಯಾರೆಲ್ ತೈಲ ಖರೀದಿಸಿದಂತಾಗಿದೆ.

ರಷ್ಯಾ ಜೊತೆಗಿನ ಆರ್ಥಿಕ ವ್ಯವಹಾರಗಳನ್ನು ಸ್ಥಿರವಾಗಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ರಿಯಾಯಿತಿ ದರದಲ್ಲಿ ದೊರೆತರೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲಾಗುತ್ತದೆ’ ಎಂದು ಈಚೆಗೆ ಹೇಳಿದ್ದಾರೆ.

ಸೌದಿಯಿಂದ ಖರೀದಿ ಇಳಿಕೆ?

ದೇಶದ ಎರಡು ತೈಲ ಸಂಸ್ಕರಣಾ ಕಂಪನಿಗಳು ಮೇ ತಿಂಗಳಲ್ಲಿ ಸೌದಿ ಅರೇಬಿಯಾದಿಂದ ಕಡಿಮೆ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುವ ಆಲೋಚನೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಸೌದಿ ಆರಾಮ್ಕೊ ಕಂಪನಿಯು ಮೇ ತಿಂಗಳಲ್ಲಿ ಏಷ್ಯಾಕ್ಕೆ ಪೂರೈಕೆ ಆಗುವ ಕಚ್ಚಾ ತೈಲದ ಬೆಲೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿದ ನಂತರದಲ್ಲಿ ಈ ಬೆಳವಣಿಗೆ ನಡೆದಿದೆ. ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವುದನ್ನು ಹೆಚ್ಚಿಸಿದೆ.

ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಸಾಲಿನಲ್ಲಿ ಸೌದಿ ಅರೇಬಿಯಾ ಮತ್ತು ಇರಾಕ್ ಮೊದಲ ಎರಡು ಸ್ಥಾನಗಳಲ್ಲಿವೆ.

ತೈಲ ಸಂಸ್ಕರಣಾ ಕಂಪನಿಗಳು ಖರೀದಿ ಪ್ರಮಾಣವನ್ನು ಅಲ್ಪ ಮಟ್ಟದಲ್ಲಿ ಮಾತ್ರ ತಗ್ಗಿಸಲಿವೆ. ಏಕೆಂದರೆ, ವಾರ್ಷಿಕ ಗುತ್ತಿಗೆಯಲ್ಲಿ ನಮೂದಿಸಿದಷ್ಟು ಮೌಲ್ಯದ ತೈಲವನ್ನು ಕಂಪನಿಗಳು ಖರೀದಿಸಲೇಬೇಕು ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT