ಮುಂಬೈ: 2025ರ ಅಕ್ಟೋಬರ್ ಮತ್ತು 2026ರ ಮಾರ್ಚ್ ತಿಂಗಳ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಿ ಬ್ಯಾಂಕ್ಗಳಲ್ಲಿ ವಿದೇಶಿ ವಿನಿಮಯದ ಮೀಸಲಾಗಿ ಇಟ್ಟಿದ್ದ ಚಿನ್ನದ ಪೈಕಿ 104 ಟನ್ ಚಿನ್ನವನ್ನು ವಾಪಸ್ ತಂದಿದೆ.

ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ನಡುವೆ ಕರೆನ್ಸಿಗಳ ಮೇಲಿನ ವಿದೇಶಿ ವಿನಿಮಯದ ಮೀಸಲು ಕುಸಿದಿದ್ದು, ಚಿನ್ನದ ಪಾಲು ಹೆಚ್ಚಿದೆ. ಹೀಗಾಗಿ, ಬಂಗಾರದ ಬೆಲೆ ಗಗನಮುಖಿಯಾಗಿರುವ ಹೊತ್ತಲ್ಲೇ ಆರ್ಬಿಐ ಮಾಸ್ಟರ್ ಸ್ಟ್ರೋಕ್ ನೀಡಿದೆ ಎಂದೇ ಹೇಳಲಾಗುತ್ತಿದೆ.

ವಿದೇಶಿ ವಿನಿಮಯ ಮೀಸಲು ಕುರಿತಂತೆ ಆರ್ಬಿಐ ಅರ್ಧವಾರ್ಷಿಕ ವರದಿ ಬಿಡುಗಡೆ ಮಾಡಿದೆ. ಅದರನ್ವಯ 2025ರ ಸೆಪ್ಟೆಂಬರ್ ಅಂತ್ಯಕ್ಕೆ ದೇಶದಲ್ಲಿ ಇಟ್ಟಿರುವ ಚಿನ್ನದ ವಿದೇಶಿ ವಿನಿಮಯದ ಮೀಸಲು ಪ್ರಮಾಣವು 575.8 ಮೆಟ್ರಿಕ್ ಟನ್ನಷ್ಟಿತ್ತು. 2026ರ ಮಾರ್ಚ್ ಅಂತ್ಯಕ್ಕೆ ಇದು 680 ಮೆಟ್ರಿಕ್ ಟನ್ಗೆ ಹೆಚ್ಚಳವಾಗಿದೆ. 6 ತಿಂಗಳ ಅವಧಿಯಲ್ಲಿ ಭಾರತದ ಖಜಾನೆಗಳಲ್ಲಿ ಇಟ್ಟಿರುವ ಚಿನ್ನದ ಪ್ರಮಾಣ 104.2 ಮೆಟ್ರಿಕ್ ಟನ್ಗಳಷ್ಟು ಹೆಚ್ಚಾಗಿದೆ.

ಹೀಗಾಗಿ, ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ನಲ್ಲಿ ಇಟ್ಟಿರುವ ಭಾರತದ ಮೀಸಲು ಚಿನ್ನದ ಪ್ರಮಾಣವು 290.4 ಮೆಟ್ರಿಕ್ ಟನ್ಗಳಿಂದ 197.7 ಮೆಟ್ರಿಕ್ ಟನ್ಗಳಿಗೆ ಇಳಿದಿದೆ.

2025ರ ಸೆಪ್ಟೆಂಬರ್ ಅಂತ್ಯಕ್ಕೆ 880.2 ಮೆಟ್ರಿಕ್ ಟನ್ಗಳಷ್ಟಿದ್ದ (97.4 ಬಿಲಿಯನ್ ಡಾಲರ್ ಮೌಲ್ಯ) ರಿಸರ್ವ್ ಬ್ಯಾಂಕಿನ ಒಟ್ಟು ಚಿನ್ನದ ಮೀಸಲು 2026ರ ಮಾರ್ಚ್ ಅಂತ್ಯದ ವೇಳೆಗೆ 880.5 ಮೆಟ್ರಿಕ್ ಟನ್ಗಳಿಗೆ (115.4 ಬಿಲಿಯನ್ ಡಾಲರ್ ಮೌಲ್ಯ) ಏರಿಕೆಯಾಗಿದೆ. ಒಟ್ಟು ವಿದೇಶಿ ವಿನಿಮಯ ಮೀಸಲುಗಳಲ್ಲಿ ಚಿನ್ನದ ಪಾಲು(ಮೌಲ್ಯದ ದೃಷ್ಟಿಯಿಂದ) ಶೇ 13.9 ರಿಂದ ಶೇ 16.7ಕ್ಕೆ ಹೆಚ್ಚಾಗಿದೆ.

ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ, ಹಲವು ಕೇಂದ್ರೀಯ ಬ್ಯಾಂಕ್ಗಳು ಆರ್ಥಿಕ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಮತ್ತು ವಿದೇಶಗಳ ಸುಪರ್ದಿಯ ಅಪಾಯಗಳನ್ನು ತಗ್ಗಿಸಲು ಚಿನ್ನದ ಮೀಸಲುಗಳನ್ನು ವಾಪಸ್ ಪಡೆದುಕೊಳ್ಳುತ್ತಿವೆ.

ಈ ವರ್ಷದ ಆರಂಭದಲ್ಲಿ ಫ್ರಾನ್ಸ್ನ ಬ್ಯಾಂಕ್ ಡಿ ಫ್ರಾನ್ಸ್, ನ್ಯೂಯಾರ್ಕ್ ಫೆಡರಲ್ ರಿಸರ್ವ್ನಿಂದ ಪ್ಯಾರಿಸ್ ಖಜಾನೆಗೆ 129 ಮೆಟ್ರಿಕ್ ಟನ್ಗಳಷ್ಟು ಚಿನ್ನವನ್ನು ವರ್ಗಾಯಿಸಿದೆ.

2025ರ ಮಧ್ಯಭಾಗದಲ್ಲಿ 64 ಮೆಟ್ರಿಕ್ ಟನ್ ಸೇರಿದಂತೆ 2023 ಮತ್ತು 2025ರ ನಡುವೆ ಆರ್ಬಿಐ 274ರಿಂದ 280 ಟನ್ನಷ್ಟು ಚಿನ್ನವನ್ನು ದೇಶಕ್ಕೆ ವಾಪಸ್ ತಂದಿದೆ. ಬ್ರಿಟನ್ನಿಂದ 100 ಟನ್, ಸರ್ಬಿಯಾ ನ್ಯಾಷನಲ್ ಬ್ಯಾಂಕ್ನಿಂದ 6 ಬಿಲಿಯನ್ ಡಾಲರ್ ಮೌಲ್ಯದ ಸಂಪೂರ್ಣ ಚಿನ್ನದ ಮೀಸಲನ್ನು ಹಿಂಪಡೆದಿದೆ.

ಭಾರತ ವಿದೇಶಗಳಲ್ಲಿಟ್ಟಿದ್ದ ಚಿನ್ನ ಹಿಂಪಡೆಯುತ್ತಿರುವುದೇಕೆ?

ಕೆಲ ವರ್ಷಗಳಿಂದ ವಿದೇಶಗಳಲ್ಲಿ ಇಟ್ಟಿರುವ ಚಿನ್ನದ ಮೀಸಲನ್ನು ಹಿಂಪಡೆಯಲು ಆರಂಭಿಸಿದ ಭಾರತ, ಕಾರ್ಯಾಚರಣೆಗೆ ಮತ್ತಷ್ಟು ವೇಗ ನೀಡಿದೆ. ಆರ್ಬಿಐ ವರದಿ ಪ್ರಕಾರ, 880.52 ಮೆಟ್ರಿಕ್ ಟನ್ಗಳಷ್ಟಿರುವ ಭಾರತದ ಚಿನ್ನದ ಮೀಸಲಿನಲ್ಲಿ ಶೇ 77ರಷ್ಟು ಅಂದರೆ, 680 ಮೆಟ್ರಿಕ್ ಟನ್ನಷ್ಟು ಚಿನ್ನ ಈಗ ಭಾರತದ ಖಜಾನೆಗಳಲ್ಲೇ ಇದೆ. 197.67 ಟನ್ನಷ್ಟು ಚಿನ್ನ ಮಾತ್ರ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ದಿ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ನಲ್ಲಿ(ಬಿಐಎಸ್) ಇದೆ. 2.8 ಟನ್ ಚಿನ್ನವನ್ನು ಠೇವಣಿ ಇಡಲಾಗಿದೆ.

ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕ ಜಾಗತಿಕ ಅಪಾಯ ಹೆಚ್ಚಳ ಹಿನ್ನೆಲೆ ವಿದೇಶಗಳ ಮೇಲೆ ಅವಲಂಬನೆ ಕಡಿಮೆ ಮಾಡಲು, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವ ಅಫ್ಗಾನಿಸ್ತಾನದ ಚಿನ್ನದ ಮೀಸಲನ್ನು ಸ್ಥಗಿತಗೊಳಿಸಿದ ನಂತರ ಭಾರತ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಈ ಘಟನೆಗಳ ಬಳಿಕ ವಿವಿಧ ದೇಶಗಳ ಕೇಂದ್ರ ಬ್ಯಾಂಕ್ಗಳು ವಿದೇಶಗಳಲ್ಲಿ ಇಟ್ಟಿರುವ ಚಿನ್ನದ ಮೀಸಲಿನ ನಿರ್ವಹಣೆಯ ಕಾರ್ಯತಂತ್ರವನ್ನೇ ಬದಲಿಸಿವೆ.

ಭಾರತವು ವಿದೇಶಿ ಬ್ಯಾಂಕ್ಗಳಲ್ಲಿ ಇಟ್ಟಿರುವ ಚಿನ್ನ ಹಿಂಪಡೆಯುತ್ತಿರುವುದಕ್ಕೆ ಪ್ರಮುಖ ಕಾರಣಗಳು

ಜಾಗತಿಕ ಅನಿಶ್ಚಿತತೆ: ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದಾಗಿ, ಭೌತಿಕ ಚಿನ್ನವನ್ನು ದೇಶೀಯವಾಗಿ ಇಟ್ಟುಕೊಳ್ಳುವುದನ್ನು ಸುರಕ್ಷಿತ ವಿಧಾನವೆಂದು ಪರಿಗಣಿಸಲಾಗುತ್ತದೆ.

ಆರ್ಥಿಕ ಸಾರ್ವಭೌಮತ್ವವನ್ನು ಬಲಪಡಿಸುವುದು: ಚಿನ್ನದ ಒಟ್ಟು ಮೀಸಲುಗಳಲ್ಲಿ ಭಾರತದೊಳಗೆ ಶೇ 77ಕ್ಕಿಂತ ಹೆಚ್ಚು (ಸುಮಾರು 680 ಟನ್) ಚಿನ್ನ ಸಂಗ್ರಹಿಸುವ ಮೂಲಕ, ಆರ್ಬಿಐ ನೇರ ನಿಯಂತ್ರಣ ಮತ್ತು ತುರ್ತು ಸಂದರ್ಭಗಲ್ಲಿ ಶೀಘ್ರ ಪ್ರವೇಶದ ಉದ್ದೇಶ ಹೊಂದಿದೆ. ಈ ಮೂಲಕ ವಿದೇಶಗಳಲ್ಲಿ ಚಿನ್ನದ ಮೀಸಲನ್ನು ವಹಿವಾಟಿಗೆ ಸಿಗದಂತೆ ಸ್ಥಗಿತಗೊಳಿಸುವ ಅಪಾಯವನ್ನು ತಗ್ಗಿಸುತ್ತದೆ.

ಕಾರ್ಯತಂತ್ರದ ಹಿಂಪಡೆಯುವ ಪ್ರವೃತ್ತಿ: ಜಾಗತಿಕವಾಗಿ ಯುದ್ಧ ಪರಿಸ್ಥಿತಿ ಉಲ್ಬಣಗೊಂಡಿದ್ದು, ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ತಮ್ಮ ಚಿನ್ನದ ಮೀಸಲುಗಳನ್ನು ಸುರಕ್ಷತೆ ಮತ್ತು ಸುಲಭ ಪ್ರವೇಶದ ಉದ್ದೇಶಗಳಿಗಾಗಿ ಸ್ವದೇಶಕ್ಕೆ ವರ್ಗಾಯಿಸಿಕೊಳ್ಳುತ್ತಿವೆ. ಆರ್ಬಿಐ ಸಹ ಇದೇ ಟ್ರೆಂಡ್ ಅನುಸರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.