ನವದೆಹಲಿ: ಕೆನಡಾ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ಟಿಎ) ಸಂಬಂಧಿಸಿದ ಮಾತುಕತೆಗಳನ್ನು ಈ ವರ್ಷದ ಅಂತ್ಯದ ಹೊತ್ತಿಗೆ ಪೂರ್ಣಗೊಳಿಸುವ ಉದ್ದೇಶ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

ಗೋಯಲ್ ಅವರು ಈಗ ಕೆನಡಾ ಪ್ರವಾಸದಲ್ಲಿದ್ದಾರೆ. 100ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗದ ನೇತೃತ್ವವನ್ನು ಅವರು ವಹಿಸಿದ್ದಾರೆ.

‘ನಮ್ಮ ದೇಶಗಳ ನಾಯಕರು ಎಫ್ಟಿಎ ಕುರಿತ ಮಾತುಕತೆಯನ್ನು ವರ್ಷದ ಅಂತ್ಯಕ್ಕೆ ಮೊದಲು ಪೂರ್ಣಗೊಳಿಸುವ ಗುರಿಯನ್ನಷ್ಟೇ ಹಾಕಿಕೊಟ್ಟಿಲ್ಲ. ಬದಲಿಗೆ, ಅವರು ಎರಡೂ ದೇಶಗಳ ವ್ಯಾಪಾರ ವಹಿವಾಟಿನ ಗಾತ್ರವನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯನ್ನೂ ನಿಗದಿ ಮಾಡಿಕೊಟ್ಟಿದ್ದಾರೆ’ ಎಂದು ಗೋಯಲ್ ಅವರು ಕೆನಡಾದ ವ್ಯಾಪಾರ ಸಚಿವ ಮಣಿಂದರ್ ಸಿಧು ಅವರ ಜೊತೆ ಒಟ್ಟಾವದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಗೋಯಲ್ ಅವರು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಭೇಟಿ ಮಾಡಿದ್ದಾರೆ. ಒಪ್ಪಂದದ ಕುರಿತಾದ ಮಾತುಕತೆಗಳು ಬೇಗನೆ ಪೂರ್ಣಗೊಳ್ಳುತ್ತವೆ ಎಂಬ ವಿಶ್ವಾಸವನ್ನು ಇಬ್ಬರೂ ವ್ಯಕ್ತಪಡಿಸಿದ್ದಾರೆ.

‘ನಾವು ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆಸುತ್ತಿದ್ದೇವೆ. ಇದು ಕೆನಡಾದ ಕಾರ್ಮಿಕರಿಗೆ ಹಾಗೂ ಉದ್ದಿಮೆಗಳಿಗೆ ಮಹತ್ವದ ಬದಲಾವಣೆ ತರಲಿದೆ. ಅವರಿಗೆ ಇದು ಬೃಹತ್ತಾದ ಹೊಸ ಮಾರುಕಟ್ಟೆಯನ್ನು ತೆರೆದುಕೊಡಲಿದೆ...’ ಎಂದು ಕಾರ್ನಿ ಅವರು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದಿದ್ದಾರೆ.

ಭಾರತ ಮತ್ತು ಕೆನಡಾ ನಡುವೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಕುರಿತಾಗಿ ಎರಡು ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ. ಮೂರನೆಯ ಸುತ್ತಿನ ಮಾತುಕತೆಯು ಒಟ್ಟಾವದಲ್ಲಿ ಮೇ 29ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.