ನವದೆಹಲಿ: ವಿಮಾನ ಇಂಧನ ಹೊರತುಪಡಿಸಿ, ದೇಶದ ಇಂಧನ ಬೇಡಿಕೆಯು ಕೋವಿಡ್–19ಕ್ಕೂ ಮೊದಲು ಇದ್ದ ಮಟ್ಟಕ್ಕೆ ಮರಳಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಅಧ್ಯಕ್ಷ ಶ್ರೀಕಾಂತ್ ಮಾಧವ ವೈದ್ಯ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಿಸಲು ಲಾಕ್‌ಡೌನ್ ಹೇರಿದ್ದರಿಂದ ಇಂಧನ ಮಾರಾಟವು ಕಳೆದ ವರ್ಷದ ಏಪ್ರಿಲ್‌ನಲ್ಲಿ ಶೇಕಡ 45.8ರಷ್ಟು ಕುಸಿತ ಕಂಡಿತ್ತು. ಲಾಕ್‌ಡೌನ್ ನಿರ್ಬಂಧ ತೆರವು ಮಾಡಲಾರಂಭಿಸಿದ ಬಳಿಕ ಮಾರಾಟದಲ್ಲಿ ಸುಧಾರಣೆ ಕಾಣಲು ಶುರುವಾಯಿತು ಎಂದು ಅವರು ಹೇಳಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಇಲ್ಲಿಯವರೆಗಿನ ಮಾರಾಟವನ್ನು ಗಮನಿಸಿದರೆ, ಡಿಸೇಲ್ ಮಾರಾಟ ಶೇ 7.4ರಷ್ಟು ಹಾಗೂ ಪೆಟ್ರೋಲ್ ಮಾರಾಟ ಶೇ 5.3ರಷ್ಟು ಹೆಚ್ಚಾಗಿದೆ.
ರಿಟೇಲ್ ವಹಿವಾಟು: ದೇಶದ ರಿಟೇಲ್ ಉದ್ಯಮದ ವಹಿವಾಟು ಕೋವಿಡ್–19ಕ್ಕೂ ಮೊದಲಿನ ಮಟ್ಟಕ್ಕೆ ಹೋಲಿಸಿದರೆ ಶೇ 93ರಷ್ಟಕ್ಕೆ ತಲುಪಿದೆ ಎಂದು ರಿಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ (ಆರ್‌ಎಐ) ತಿಳಿಸಿದೆ.
ಪಾದರಕ್ಷೆ, ಸೌಂದರ್ಯ ವರ್ಧಕ, ವೈಯಕ್ತಿಕ ಕಾಳಜಿ, ಕ್ರೀಡಾ ಉತ್ಪನ್ನಗಳು, ಆಹಾರ ಮತ್ತು ದಿನಸಿ ವಿಭಾಗವು ತಿಂಗಳಿನಿಂದ ತಿಂಗಳಿಗೆ ಸ್ಥಿರವಾಗಿ ಚೇತರಿಕೆ ಕಂಡುಕೊಳ್ಳುತ್ತಿವೆ ಎಂದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.