ನವದೆಹಲಿ : ದೇಶದಲ್ಲಿ ಇಂಧನ ಪೂರೈಕೆಯಲ್ಲಿ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಕೆಲವು ಬಂಕ್ಗಳಲ್ಲಿ ಇಂಧನ ಖಾಲಿ ಆಗಿದ್ದಕ್ಕೆ ಸ್ಥಳೀಯ ಸಂಗತಿಗಳು ಕಾರಣ ಎಂದು ಹೇಳಿದೆ.

ಕೆಲವೆಡೆ ಇಂಧನ ಖಾಲಿ ಆಗಿದ್ದುದು ತಾತ್ಕಾಲಿಕ ಸಮಸ್ಯೆ ಮಾತ್ರ. ಆಯಾ ಸ್ಥಳಗಳಿಗೆ ಸಂಬಂಧಿಸಿದ ಬೇಡಿಕೆ–ಪೂರೈಕೆಯಲ್ಲಿನ ವ್ಯತ್ಯಾಸವು ಇದಕ್ಕೆ ಕಾರಣ ಎಂದು ಕಂಪನಿ ಹೇಳಿದೆ.

ಬೆಳೆ ಕೊಯ್ಲಿನ ಸಂದರ್ಭದಲ್ಲಿ ಕೆಲವೆಡೆ ಡೀಸೆಲ್ ಬಳಕೆ ಹೆಚ್ಚಾಗಿದೆ. ಖಾಸಗಿ ಬಂಕ್ಗಳಲ್ಲಿ ಬೆಲೆ ಜಾಸ್ತಿ ಇರುವ ಕಾರಣದಿಂದಾಗಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಬಂಕ್ಗಳಿಗೆ ಗ್ರಾಹಕರು ಬರುತ್ತಿದ್ದಾರೆ. ಕೈಗಾರಿಕಾ ಬಳಕೆ ಉದ್ದೇಶದ ಡೀಸೆಲ್ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರಕ್ಕೆ ಅನುಗುಣವಾಗಿ ಇರುವ ಕಾರಣದಿಂದಾಗಿ ಬೃಹತ್ ಪ್ರಮಾಣದಲ್ಲಿ ಡೀಸೆಲ್ ಬಳಸುವ ಸಾಂಸ್ಥಿಕ ಬಳಕೆದಾರರು ಕೂಡ ಬಂಕ್ಗಳ ಕಡೆ ಬರುತ್ತಿರುವುದರಿಂದಾಗಿ ಬೇಡಿಕೆ ಜಾಸ್ತಿ ಆಗಿದೆ ಎಂದು ಅದು ಹೇಳಿದೆ.

ಮೇ 1ರಿಂದ 22ರವರೆಗಿನ ಅವಧಿಯಲ್ಲಿ ದೇಶದಲ್ಲಿ ಪೆಟ್ರೋಲ್ ಮಾರಾಟವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14ರಷ್ಟು ಜಾಸ್ತಿ ಆಗಿದೆ, ಡೀಸೆಲ್ ಮಾರಾಟವು ಶೇ 18ರಷ್ಟು ಹೆಚ್ಚಾಗಿದೆ. ಅಂದರೆ ಬೇಡಿಕೆಯು ಅಸಾಮಾನ್ಯವಾದ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಬೇಡಿಕೆಗೆ ಅನುಗುಣವಾಗಿ ಇಂಧನ ಪೂರೈಕೆ ಮಾಡಲಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಕಂಪನಿಗಳ ಬಳಿ ಇಂಧನ ದಾಸ್ತಾನು ಸಾಕಷ್ಟಿದೆ. ಕೆಲವೆಡೆ ಪೂರೈಕೆಯಲ್ಲಿ ಆಗಿರುವ ವ್ಯತ್ಯಾಸವನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೂಡ ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.