ಸೋಮವಾರ, ಜುಲೈ 4, 2022
25 °C

ಜಿಡಿಪಿ ಬೆಳವಣಿಗೆ ದರ ತಗ್ಗಿಸಿದ ಮಾರ್ಗನ್ ಸ್ಟ್ಯಾನ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಚ್ಚಾ ತೈಲ ಬೆಲೆಯು ದುಬಾರಿ ಆಗಿರುವುದು ವಿಶ್ವದಾದ್ಯಂತ ಆರ್ಥಿಕ ಚೇತರಿಕೆಗೆ ಅಡ್ಡಿಯಾಗಿರುವ ನಡುವೆ, ಮಾರ್ಗನ್‌ ಸ್ಟ್ಯಾನ್ಲಿ ಸಂಸ್ಥೆಯು ಭಾರತದ 2022–23ನೇ ಸಾಲಿನ ಆರ್ಥಿಕ ಬೆಳವಣಿಗೆ ಅಂದಾಜು ದರವನ್ನು ಶೇಕಡ 7.9ಕ್ಕೆ ತಗ್ಗಿಸಿದೆ.

ಅಲ್ಲದೆ, ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ 6ರಷ್ಟು ಇರಲಿದೆ, ದೇಶದ ಚಾಲ್ತಿ ಖಾತೆ ಕೊರತೆ ಪ್ರಮಾಣವು ಜಿಡಿಪಿಯ ಶೇ 3ರಷ್ಟು ಇರಲಿದೆ ಎಂದು ಅಂದಾಜು ಮಾಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು ಜೂನ್‌ನಲ್ಲಿ ರೆಪೊ ದರವನ್ನು ಹೆಚ್ಚಳ ಮಾಡಬಹುದು ಎಂದು ಮಾರ್ಗನ್ ಸ್ಟ್ಯಾನ್ಲಿ ನಿರೀಕ್ಷೆ ಹೊಂದಿದೆ. ಏಪ್ರಿಲ್‌ನಲ್ಲಿ ಆರ್‌ಬಿಐ ರಿವರ್ಸ್ ರೆಪೊ ದರವನ್ನು ಹೆಚ್ಚಿಸಬಹುದು ಎಂದು ಅಂದಾಜಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು